ಅನುದಿನ‌ ಕವನ-೭೯೯, ಕವಿಯತ್ರಿ: ವಸು ವತ್ಸಲೆ, ಬೆಂಗಳೂರು, ಕವನದ ಶೀರ್ಷಿಕೆ: ಭಾವಗೀತೆ

ಭಾವಗೀತೆ

ಕಣ್ಣ ಕೊಳದಿ ನಿನ್ನ ನೆನಪ
ತಾವರೆ ಅರಳಿ ನಿಂತಿವೆ
ಬಣ್ಣಗೊಂಡ ನನ್ನ ಕನಸ
ಹೊಂಬಿಸಿಲು ಹೊಳೆದಿದೆ

ಮಂಜಿನ ಸೋನೆಯು ಜಿನುಗುತಾ
ತಬ್ಬಿದೆ ಮನಪರ್ವದ ಕಂದರಗಳಲಿ
ಮನದ ಬಯಲಿನಲ್ಲಿ ನಕ್ಷತ್ರಗಳು
ಚೆಲ್ಲಿ ನಗುತಿವೆ ಹೂದುಟಿಯಲಿ

ಬೆಚ್ಚನೆ ಸುಯ್ದು ತಿಣುಕುವ ತಂಗಾಳಿ
ಬೆಳ್ದೆರೆಯ ಸರಿಸಿದೆ ಪೂರ್ವಾಚಲದಲಿ
ವಸಂತ ವಿಯೋಗಕೆ ಜ್ಯೋತೀರ್ಮಯ
ನಿನ್ನ ನೆನಪ ಸಾನಿದ್ಯ ಒಲವಧ್ಯಾನದಲಿ

-ವಸು ವತ್ಸಲೆ, ಬೆಂಗಳೂರು
*****

Leave a Reply

Your email address will not be published. Required fields are marked *