Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಕಾವ್ಯ ಕಹಳೆ, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನಾದಬ್ರಹ್ಮ - Karnataka Kahale

ಕಾವ್ಯ ಕಹಳೆ, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನಾದಬ್ರಹ್ಮ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ  ಸಂಗೀತ ಮಾಂತ್ರಿಕ, ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ‘ನಾದಬ್ರಹ್ಮ’ ಕವಿತೆ ಪ್ರಕಟಿಸುವ ಮೂಲಕ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ🍀🌺🎂🍀💐👇

ನಾದಬ್ರಹ್ಮ…

ಕೊಳಲ ಇಬ್ಬನಿ ಪದವ
ಉಸಿರಲೆ ನುಡಿಸಿ ಸಂಗೀತವ
ಕರಗಿಸೋ ಎಲ್ಲ ನೋವ
ಭೂಮ್ತಾಯಿ ಮೆಚ್ಚಿ ನಲಿವ
ಸಂಗೀತ ಬ್ರಹ್ಮ ಈ ನಾದಬ್ರಹ್ಮ ಹಂಸಲೇಖ…

ಗುಡಿಗೋಪುರನೆಲ್ಲ
ಮಸೀದಿ ಚರ್ಚನೆಲ್ಲ
ವಿಹಾರ ಮಂದಿರವನ್ನೆಲ್ಲ
ಆವರಿಸೋ ಮುಂಜಾನೆ ಹಾಡು ನಿನ್ನಪದ
ಮನೆಮಂದಿ ಎಲ್ಲ
ಹಿರಿಕಿರಿಯರೆಲ್ಲ
ಬೆಂದುನೊಂದವರೆಲ್ಲ
ಕೇಳಿ ಸಂತೈಸಿಕೊಳ್ಳೋ ಹಾಡು ನಿನ್ನಪದ
ಸ್ವರ ಮಾಂತ್ರಿಕ ನೀ ಸಂಗೀತ ಬ್ರಹ್ಮ
ಪದ ಮಾಣಿಕ್ಯ ನೀ ನಾದಬ್ರಹ್ಮ…

ಮಕ್ಕಳಿಗೆ ಸವಿ ಜೋಗುಳ
ತಾಯ್ತನಕೆ ಮುದದವಳ
ಚೈತ್ರದ ಹೊಸತನದಾಡು ನಿನ್ನಪದ
ಪ್ರೇಮಿಗಳಿಗೆ ಹೂಗೋಳ
ಪ್ರೀತಿಗದುವೆ ಮಹಾತಾಳ
ಬೆಚ್ಚನರಳಿದೊಸ ಪೇಮಿಗಳ ಹಾಡು ನಿನ್ನಪದ
ಸ್ವರ ಮಾಂತ್ರಿಕ ನೀ ಸಂಗೀತ ಬ್ರಹ್ಮ
ಪದ ಮಾಣಿಕ್ಯ ನೀ ನಾದಬ್ರಹ್ಮ…


-ಸಿದ್ದುಜನ್ನೂರ್, ಚಾಮರಾಜ ನಗರ
*****