ಕಾಪು ಶಾಸಕ ಜಿ.ಸುರೇಶ ಶೆಟ್ಟರಿಗೆ ಜು.1 ಕ್ಕೆ ಬಳ್ಳಾರಿಯಲ್ಲಿ ಅಭಿನಂದನಾ ಸಮಾರಂಭ

ಬಳ್ಳಾರಿ, ಜೂ.28: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ  ಶಾಸಕ ಗುರ್ಮೆ ಸುರೇಶ್ ಪಿ.ಶೆಟ್ಟಿ ಅವರಿಗೆ ನಗರದ ತುಂಗಭದ್ರ ಬಂಟರ ಸಂಘದಿಂದ ಬಂಟ್ಸ್ ಭವನದಲ್ಲಿ ಜು. 1 ರಂದು ಸಂಜೆ 6 ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ‌ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷರಾಗಿ, ತುಂಗಭದ್ರ ಬಂಟರ ಸಂಘದ ಮೂಲಕ ಸಾಂಸ್ಕೃತಿಕ ಕ್ಷೇತ್ರದ ಪ್ರೋತ್ಸಾಹಕರಾಗಿ, ಸಮಾಜ ಸೇವಕರಾಗಿ, ಉದ್ಯಮಿಯಾಗಿ ಸೇವೆ ಸಲ್ಲಿಸಿ ತಮ್ಮ ಹುಟ್ಟೂರು ಕ್ಷೇತ್ರದಲ್ಲಿ ಈಗ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಸುರೇಶ್ ಶೆಟ್ಟರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ.                                       ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಮಾಜಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ನಾರಾ ಭರತ್ ರೆಡ್ಡಿ, ನಗರ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮೇಯರ್ ಡಿ.ತ್ರಿವೇಣಿ ಅವರು ಪಾಲ್ಗೊಳ್ಳಲಿದ್ದು. ಸಭಾಧ್ಯಕ್ಷತೆಯನ್ನು ಡಾ.ಮಾಧವ ಶೆಟ್ಟಿ ಅವರು ವಹಿಸಿಕೊಳ್ಳಲಿದ್ದಾರೆಂದು ಸಂಘದ ಕಾರ್ಯದರ್ಶಿ ಸೂರ್ಯಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *