Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೯೬೧, ಪ್ರಸಿದ್ಧ ಕವಿ: ಗುಲ್ಜಾರ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ - Karnataka Kahale

ಅನುದಿನ ಕವನ-೯೬೧, ಪ್ರಸಿದ್ಧ ಕವಿ: ಗುಲ್ಜಾರ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ

ತುಂಬಾ ಕಾಡಿಸುತ್ತಾಳೆ ಈ ಮುದುಕಿ
ಇರುಳೆಲ್ಲಾ ಕೆಮ್ಮುತ್ತಾಳೆ
ಔಷಧಿ ಕುಡಿಯುತ್ತಾಳೆ
ಮತ್ತೆ ನನ್ನ ಕೈ ಹಿಡಿದು
ಮಲಗುತ್ತಾಳೆ..

ಹೊತ್ತಲ್ಲದ ಹೊತ್ತಿನಲ್ಲಿ ಹೊದಿಕೆ
ತಾನೇ ತೆಗೆದೆಸೆದು ಹೇಳುತ್ತಾಳೆ
ಚಳಿಯಾಗುತ್ತಿದೆ ಎಂದು..!

ನಾನೇ ನನ್ನ ಕೈಗಳಲ್ಲಿ ನಿನ್ನ ಹೊತ್ತು
ಹೋಗಿ ಚಿತೆಯಲ್ಲಿಟ್ಟು ಬಂದಿದ್ದೆ

ಈಗಲೂ ಚಳಿಯೆನ್ನುತ್ತಿರುವೆಯಲ್ಲ..

ನೀನ್ಯಾಕೆ ನನ್ನ ಕನಸು,
ಕನವರಿಕೆಗಳಿಂದ
ಮರೆಯಾಗಿ ಹೋಗುತ್ತಿಲ್ಲ

-ಗುಲ್ಜಾರ್

ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
—–