ವಿಎಸ್ ಕೆವಿವಿ ಹಂಗಾಮಿ ಕುಲಪತಿ ಪ್ರೊ.ಎ ಎಲ್ ಝಂಡೇಕರ್ ಅವರಿಗೆ ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದಿಂದ ಸನ್ಮಾನ

ಬಳ್ಳಾರಿ, ಡಿ.13: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಹಂಗಾಮಿ ಕುಲಪತಿಯಾಗಿ ನೇಮಕವಾಗಿರುವ ಪ್ರಾಧ್ಯಾಪಕ ಪ್ರೊ.ಅನಂತ್ ಎಲ್ ಝಂಡೇಕರ್ ಅವರನ್ನು ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಸನ್ಮಾನಿಸಿ ಗೌರವಿಸಿತು.

ಸಂಘದ ರಾಜ್ಯ ಗೌರವಾಧ್ಯಕ್ಷರೂ ಆಗಿರುವ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಟಿ. ದುರುಗಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳು ಬುಧವಾರ
ಸಮಾಜ ವಿಜ್ಞಾನ ನಿಕಾಯದ ಡೀನರು ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಕುಲಪತಿ ಪ್ರೊ.‌ಝಂಡೇಕರ್ ಅವರನ್ನು ಸತ್ಕರಿಸಿದರು.
ಅತಿಥಿ ಉಪನ್ಯಾಸಕರನ್ನು ವಿವಿ ಪರೀಕ್ಷಾ ಕಾರ್ಯಗಳಲ್ಲಿ ಎಕ್ಸ್ಟ್ರನಲ್ ಗಳಾಗಿ ನೇಮಕ, ಮೌಲ್ಯಮಾಪನದ ದಿನ ಭತ್ಯೆ ಹೆಚ್ಚಳ, ಹಾಗು ಇತರೇ ವಿಷಯಗಳ ಕುರಿತು ಕುಲಪತಿಗಳೊಂದಿಗೆ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಚರ್ಚಿಸಿದರು.
ಈ ಸಂದರ್ಭದಲ್ಲಿ  ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ.ಟಿ, ರಫಿಕ್.ಎಂ, ರುದ್ರಮುನಿ, ಸಿದ್ದೇಶ್, ಗುರು, ನಾಗಪ್ಪ.ಈ, ಬಸವರಾಜ್ ಮತ್ತಿತರರು ಇದ್ದರು.
*****

Leave a Reply

Your email address will not be published. Required fields are marked *