Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೧೦೭, ಕವಿ:ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಣ್ಣಂಚಿನ ಈ ಒಂದು ಹನಿಗೆ.... - Karnataka Kahale

ಅನುದಿನ ಕವನ-೧೧೦೭, ಕವಿ:ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಣ್ಣಂಚಿನ ಈ ಒಂದು ಹನಿಗೆ….

ಕಣ್ಣಂಚಿನ ಈ ಒಂದು ಹನಿಗೆ…

ಮನದಿ ಮಡುಗಟ್ಟಿದ ನೂರು ಭಾವಗಳು
ಅಂತರಂಗ ಬಹಿರಂಗಗಳಾಚೆ ನೆನಪುಗಳು
ಹೆಪ್ಪುಗಟ್ಟಿಸಿದ ಸಾವಿರ ತಂತಿಗಳ ನಿನಾದ
ಕಣ್ಣಂಚಿನ ಒಂದು ಹನಿಗೆ..

ನಗುವಿಗೊಂದು ಅಳುವಿಗೊಂದು ಮಾತು
ಮನಸಿಗೊಂದೊಂದು ಕನಸುಗಳ ಮೌನ
ಭಾವ ಕಟ್ಟೆಯೊಡೆದ ಮಾತುಮೌನಗಳು
ಕಣ್ಣಂಚಿನ ಒಂದು ಹನಿಗೆ..

ಹೇಳಲಾಗದ ಮಧುರತೆಯಲೇಕೋ ತಳಮಳ
ತಾಳಲಾರದ ತೊಳಲಾಟಲದೊಳೇಕೋ ಕಳವಳ
ತೆವಳುತ ಉರುಳುತ ದಡವ ಸೇರುವ ತವಕ
ಕಣ್ಣಂಚಿನ ಒಂದು ಹನಿಗೆ..

ಭಾವನೇತ್ರಗಳ ಮಿಡಿತಕೊಂದು ಹನಿ ಧಾರೆ
ಒಳಗಡಗಿದ ಭಾವ ತೋಯ್ದಾಟಗಳಿಗಾಸರೆ
ಒಳಮನ ಭಾವಬಿಂಬ ನೋಟ ಜಿಗಿಯುವಾಸೆ
ಕಣ್ಣಂಚಿನ ಈ ಒಂದು ಹನಿಗೆ..


-ಎಂ.ಆರ್. ಸತೀಶ್, ಕೋಲಾರ
—–