ಅನುದಿನ ಕವನ-೧೧೩೬, ಕವಿ: ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ, ಕವನದ ಶೀರ್ಷಿಕೆ: ನೀ…..,                          (ಚಿತ್ರ ಕೃಪೆ:ಕಂದನ್ ಜಿ ಮಂಗಳೂರು)

ನೀ…

ನನ್ನ
ತಪ್ಪಷ್ಟೇ ತೇಲಿಸುವೆ
ಸರಿಗಳನ್ನೇಕೆ ಮುಳುಗಿಸುವೆ?

ಮಾತಷ್ಟೇ ಮೊನಚೆನ್ನುವೆ
ಚುಚ್ಚುವ ಹಚ್ಚೆಯನ್ನೇಕೆ ಇಚ್ಚಿಸುವೆ?

ಸಿಟ್ಟಷ್ಟೇ ರಟ್ಟು ಮಾಡುವೆ
ಸಮಾಧಾನವನ್ನೇಕೆ ಗುಟ್ಟಾಗಿಸಿರುವೆ?

ಮೊಂಡುತನವಷ್ಟೇ ತೋರಿಸುವೆ
ಮೊಂಡಿಯೂರಿದ್ದನ್ನೇಕೆ ಮುಚ್ಚಿಟ್ಟಿರುವೆ?

ಎಡವಿದ್ದಷ್ಟೇ ದೊಡ್ಡಾಗಿಸುವೆ
ಎದ್ದು ನಡೆದದ್ದನ್ನೇಕೆ ಸಣ್ಣಾಗಿಸಿರುವೆ?

ಕವಿತೆಯನ್ನು ಸವಿಯುವೆ
ಕವಿಯನ್ನೇಕೆ ಹದಹಾಕಿ ತಿವಿಯುವೆ?

-ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ

(ಚಿತ್ರ ಕೃಪೆ:ಕಂದನ್ ಜಿ ಮಂಗಳೂರು)

Leave a Reply

Your email address will not be published. Required fields are marked *