ಅರ್ಥವಾಗಲೇ ಇಲ್ಲ
ಭುವಿಯ ಯಾವದೋ ಮೂಲೆಯಲ್ಲಿ
ಒಂದು ಸೂರು
ಒಂದಷ್ಟು ಬದುಕು,
ಆಟಗಾರ ಮುಗಿಯುವವರೆಗೆ
ಹೆಸರು ಪದವಿ ಪದನಾಮ ಬಿರುದು ಎಲ್ಲಾ,
ಇದ್ದಾಗ ಹೊಡೆದಾಟ ಬಡಿದಾಟ ಕಾದಾಟ
ರಾಗದ್ವೇಷ,ಸಂಚು ಕುತಂತ್ರ
ಆಟ ಮುಗಿದ ಮೇಲೆ ಎಲ್ಲವೂ ನಿರ್ನಾಮ
ಹೂಗಳ ಬದುಕು ನೋಡಿಯೂ ಹೀಗಾದೆವಲ್ಲ ನಾವು,
ಹೀಗಾಗಿಬಿಟ್ಟೆವಲ್ಲ ನಾವು,
ಕ್ಷಣ ಹೊತ್ತು ಅರಳಿ ಬಾಡಿದರೂ ಅದರ ನಗುವೇ ನಗು
ಅದರ ನಗುವ ನಿಲ್ಲಿಸುವವರಾರು?
ಪರಿಮಳವ ಬೀರಿ ಎಲ್ಲರ ಮನವರಳಿಸಿ ಆನಂದದಿ
ಮುಗುಳ್ನಕ್ಕು ಮುದುಡುವುದಲ್ಲ,ಮನವರಳಿ ಮಾತನಾಡುವುದಲ್ಲ,
ಅದೆಲ್ಲವ ಗಮನಿಸಿದ
ನಾವು ಏನನ್ನೂ ಕಲಿಯಲೇ ಇಲ್ಲವಲ್ಲ,
ಬದುಕು ನಮಗೆ ಅರ್ಥವಾಗಲೇ ಇಲ್ಲವಲ್ಲ..

– ಮಹಿಮ, ಬಳ್ಳಾರಿ
