ಅನುದಿನ ಕವನ-೧೧೫೮, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ, ಕವನದ ಶೀರ್ಷಿಕೆ:ಒಂದು ಆಪ್ತ ಪದ್ಯ

ಒಂದು ಆಪ್ತ ಪದ್ಯ

ಎಷ್ಟು ಹತ್ತಿರ ಹತ್ತಿರವಿದ್ದೆವು
ಉಸಿರು ಉಸಿರು ಬೆಸೆದಕೊಂಡು
ಹೊಸ ಹೆಸರು ಚಿಗುರಿದಂತೆ

ಎಷ್ಟು ಆಪ್ತವಾಗಿ ಪಿಸುಗಟ್ಟಿದ್ದೆವು
ಮಾತಿನ ಕಿವಿ ತೆರೆದುಕೊಂಡು
ಹೊಸ ಮೌನ ಮಿಳಿತದಂತೆ

ಎಷ್ಟು ಆಪ್ತವಾಗಿ ಪಿಸುಗಟ್ಟಿದ್ದೆವು
ಮಾತಿನ ಕಿವಿ ತೆರೆದುಕೊಂಡು
ಹೊಸ ಮೌನ ಮಿಳಿತದಂತೆ

ಎಷ್ಟು ತೀವ್ರವಾಗಿ ಬದುಕಿದ್ದೇವು
ಒಳಗು ಹೊರಗುಗಳ ಒಂದುಮಾಡಿ
ಹೊಸ ಲೋಕ ಸೆಳೆತದಂತೆ

ಈಗ ಈಗೀಗ
ಇಬ್ಬರ ಹೂತಲೆ ಹೆಗಲಿಗೆ ಭಾರ
ಬೆನ್ನ ಹಿಂದೆ ಸಾಲುಗಟ್ಟಿದ ಮಾತು
ಮತ್ತು ಒಬ್ಬರಿಗೊಬ್ಬರು ಅಪರಿಚಿತರು


-ವಿಶಾಲ್ ಮ್ಯಾಸರ್, ಹೊಸಪೇಟೆ
—–

Leave a Reply

Your email address will not be published. Required fields are marked *