ಅನುದಿನ ಕವನ-೧೧೬೯, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಸಂವಿಧಾನ

ಸಂವಿಧಾನ….

ಎಲ್ಲರೂ
ಅವರವರ ಹೆಜ್ಜೆಗೆ
ಬೆಳಕುಡುಕುತ್ತಿದ್ದರು
ಆದರೆ ನೀನೊಬ್ಬನೆ ಭೀಮ
ಕತ್ತಲ ಜನಕ್ಕೆ
ಬೆಳಕಿನಕ್ಷರದ ಪುಸ್ತಕ ಬರೆದವನು…

ಎಲ್ಲರು
ಅವರವರ ಹಾದಿಗೆ
ಬೆಳಕತ್ತಿಸಿಕೊಂಡು ಹೊರಟರು
ಆದರೆ ನೀನೊಬ್ಬನೆ ಭೀಮ
ಬಡವರ ಹಸಿವಿಗೆ
ಬೆಳಕಿನಕ್ಷರದ ಪುಸ್ತಕವಾಗಿ ಕೈ ತುತ್ತಾದವನು…

ಎಲ್ಲರು
ಅವರವರ ಪಾಡಿಗೆ
ಅವರ ಮೇಲುಕೀಳಿನ
ಮೌಡ್ಯವ ಬಿತ್ತಿ
ಮನುಧರ್ಮಶಾಸ್ತ್ರವ ಜಾರಿಗೊಳಿಸುವಾಗ
ನೀನೊಬ್ಬನೆ ಭೀಮ
ಸಂವಿಧಾನ ಬರೆದು
ಸಮಾನತೆಯ ಅಕ್ಷರದ ಬೆಳಕಾಗಿ ಮೂಡಿದವನು…


-ಸಿದ್ದುಜನ್ನೂರ್, ಚಾಮರಾಜ ನಗರ
—–

Leave a Reply

Your email address will not be published. Required fields are marked *