ಅನುದಿನ ಕವನ-೧೨೪೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ:ಹತ್ತು ಹಾಯ್ಕುಗಳು 

ಹತ್ತು ಹಾಯ್ಕುಗಳು

೧
ಪಾತಾಳ ಕಂಡ
ಜೀವಜಲ; ತುಂಬಿದ
ಪಾಪದ ಕೊಡ

೨
ವಸಂತ ಬಂದ
ಕಾಲಕೆ; ವಸುಂಧರೆ
ವಿಶ್ವ ಸುಂದರಿ

೩
ನೀ ನಕ್ಕ ದಿನ
ದೀಪಾವಳಿ; ಸಿಡುಕು
ಹೋಳಿ ಹುಣ್ಣಿಮೆ

೪
ಅಡ್ಡದಾರಿಯ
ತುಂಬ; ಚುಚ್ಚಿ ನಗುವ
ಅತೃಪ್ತ ಮುಳ್ಳು

೫
ಸಮನಾಗವು
ತಾಯಿಗವು; ಧರೆಯ
ಕೋಟಿ ದೇವರು

೬
ಪ್ರತಿ ಪುಟದಿ
ನಿನ್ನದೇ ಚಿತ್ರ; ಕೃತಿ
ಚೌರ್ಯದಂಜಿಕೆ

೭
ಬೆಲ್ಲ ಕೊಡುವ
ಸಮಯಕೆ; ಇರುವೆ
ದಂಡು ಹಾಜರು

೮
ಆಲಿಂಗನದ
ಅಬ್ಬರಕೆ; ಸಮುದ್ರ
ತೆರೆ ತಬ್ಬಿಬ್ಬು

೯
ತಿದ್ದಿ ತೀಡಿದ
ಹುಬ್ಬು; ಸಂಜೆ ಮೂಡಿದ
ಕಾಮನ ಬಿಲ್ಲು

೧೦
ಗಳಗಳನೇ
ಅತ್ತ ಮಳೆ; ಇಳೆಗೆ
ಹೊಸತು ಕಳೆ


-ಸಿದ್ದಲಿಂಗಪ್ಪ ಬೀಳಗಿ, ಹುನಗುಂದ

Leave a Reply

Your email address will not be published. Required fields are marked *