ಬಳ್ಳಾರಿ: ಬಗುರು ಹುಕುಂ ಸಮಿತಿ ಅಧ್ಯಕ್ಷರಾಗಿ ಸಿದ್ದಮ್ಮನಹಳ್ಳಿ ತಿಮ್ಮನಗೌಡ ಪದಗ್ರಹಣ

ಬಳ್ಳಾರಿ, ಜೂ. 20: ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ‌ ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿ ಸಿದ್ದಮ್ಮನಹಳ್ಳಿಯ ಹೆಚ್.ತಿಮ್ಮನಗೌಡ ಮತ್ತು ಸದಸ್ಯರು ಗುರುವಾರ ನಗರದ ತಾಲೂಕು‌ಕಚೇರಿ ಸಭಾಂಗಣದಲ್ಲಿ ಪದಗ್ರಹಣ ಮಾಡಿದರು.                   ಈ ಸಂದರ್ಭದಲ್ಲಿ ಮಾಜಿ ಸಚಿವ, ಗ್ರಾಮಿಣ ಶಾಸಕ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್ ಮುಖಂಡರುಗಳಾದ ಬಿ.ವೆಂಕಟೇಶ್ ಪ್ರಸಾದ್, ರಾಂಪ್ರಸಾದ್, ಗೋನಾಳ್ ನಾಗಭೂಷಣಗೌಡ, ಪಾಲಿಕೆ ಸದಸ್ಯರು, ವೀರಶೈವ ಸಮುದಾಯದ ಮುಖಂಡರು ಆಗಮಿಸಿ ತಿಮ್ಮನಗೌಡ ಅವರಿಗೆ ಗೌರವಿಸಿ ಶುಭಕೋರಿದರು.                          ಈ ವೇಳೆ ಮಾತನಾಡಿದ ಪಕ್ಷದ ಮುಖಂಡರು ಉತ್ತಮ‌ ಕೆಲಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿದಬೇಕು ಹಾಗೂ ಬಡ ಜನರ ಆಶಯದಂತೆ ಕೆಲಸ ನಿರ್ವಹಿಸುವಂತೆ ಹೇಳಿದರು.                                                  ಪದಗ್ರಹಣ ನಂತರ ಮಾತನಾಡಿದ ತಿಮ್ಮನಗೌಡ ಅವರು ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಂಮತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಮುಖಂಡರ ಆಶಯದಂತೆ ನೀಡಿರುವ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಬಗರ್ ಹುಕುಂ ಸಾಗುವಳಿದಾರರ ಹಿತ ಕಾಪಾಡುವುದಾಗಿ ಹೇಳಿದರು.                                ಸಮಿತಿ ಸದಸ್ಯರಾಗಿ ನಗರದ ಎಲ್.ಗೋವರ್ಧನರೆಡ್ಡಿ, ಮೋಕಾದ ವಿ.ಶ್ರೀನಿವಾಸ್, ರೂಪನಗುಡಿಯ ಆರ್.ಗಂಗಮ್ಮ ನೇಮಕ ಗೊಂಡಿದ್ದಾರೆ.

——

Leave a Reply

Your email address will not be published. Required fields are marked *