ಅನುದಿನ‌ ಕವನ-೧೩೪೫, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಮುಸ್ಸಂಜೆ ಮಾತು

ಮುಸ್ಸಂಜೆ ಮಾತು

ಬೇಡ ಬದುಕಿಗೆ ಇನ್ನೆನೂ..
ನಾ ಬೇಸರದಿ ಇರುವಾಗ ಭರವಸೆ ತುಂಬುವ
ನಿನ್ನ ಮಾತುಗಳೇ ಸಾಕು!
ನಾ ಖೇದದಿಂದಿರುವಾಗ ಖುಷಿಪಡಿಸುವ ನಿನ್ನ ಕಿರುನಗೆಯೇ ಸಾಕು!
ನಾ ಯಾವುದೋ ನೋವಲಿ ಕುಸಿದು ಕುಳಿತಾಗ ಕಣ್ಣಂಚಿನ ಮಿಂಚಲಿ ತರವಲ್ಲ ಇದು ನಿನಗೆ.. ಪುಟಿದೇಳು ಎನುವ ನಿನ್ನ ಸಂಜ್ಞೆಯೇ ಸಾಕು!
ವಿಷಾದಭಾವದಿ ನಾನಿರುವಾಗ ವಿನೋದ ಮಾಡುತ ತಬ್ಬಿ ಬಿಗಿದಪ್ಪಿ ಹಣೆಗೊಂದು ಹೂಮುತ್ತನಿಡು ಸಾಕು!
ಅದೇನೇ ಬರಲಿ ಬಾಳುವೆ ನಾ ಎನುತ
ದಿಟ್ಟತನದಿ ಗಟ್ಟಿಗೊಳ್ಳುವೆ ನೋವು ನಲಿವುಗಳಿಗೆ ಸಮನಾಗಿ ಎದೆಗೊಟ್ಟು ನಸುನಗುತ!!
ಹರೆಯ ಮುಗಿವ ಕಾಲ
ಬದುಕು ಸಾಗಲಿ ನಾವಿರುವ ತನಕ
ಭರವಸೆಯಲಿ ಸಲಿಲ.!
ಇದೆಲ್ಲವೂ ದೇವರ ಲೀಲ.
ನಿನಗೆ ನಾ..ನನಗೆ ನೀ…!!

ಇಂತಿ ನಿನ್ನೊಲವು.


-ಶಾಂತಾ ಪಾಟೀಲ್, ಸಿಂಧನೂರು
—–

Leave a Reply

Your email address will not be published. Required fields are marked *