ರಂಗ ಕಲಾವಿದ ಟಿ. ನಾಗಭೂಷಣ್ ಗೆ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ

ಬಳ್ಳಾರಿ, ಸೆ.27: ನಗರದ ರಂಗಭೂಮಿ ಕಲಾವಿದ ಟಿ.ನಾಗಭೂಷಣ ಕಲಾ ಸೇವೆಯನ್ನು ಗುರುತಿಸಿ ಸಮತಾ ಸಾಹಿತಿ ಕಲಾ ಟ್ರಸ್ಟ್ ಅಕ್ಕಿನೇನಿ ನಾಗೇಶ್ವರರಾವ್ ಕಲಾ ಪ್ರಶಸ್ತಿ ನೀಡಿ ಸನ್ಮಾನಿಸಿತು.                                     ಟ್ರಸ್ಟ್ ವತಿಯಿಂದ ನಗರದ ರಾಘವ ಸಂಗೀತ ಭವನದಲ್ಲಿ ಗುರುವಾರ ಜರುಗಿದ ಅಕ್ಕಿನೇನಿ ನಾಗೇಶ್ವರರಾವ್ ಅವರ 101ನೆ ಜಯಂತಿ ಕಾರ್ಯಕ್ರಮದಲ್ಲಿ ನಾಗಭೂಷಣ್ ಅವರಿಗೆ ಪ್ರಶಸ್ತಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.                                       ‌‌‌‌‌ ಸಮತಾ ಸಾಹಿತಿ ಅಧ್ಯಕ್ಷ ಡಾ. ಸುರೇಂದ್ರ ಬಾಬು, ರಾಘವ ಸ್ಮಾರಕ ಸಂಘ ಗೌರವ ಅದ್ಯಕ್ಷ ಚೆನ್ನಪ್ಪ, ಅಧ್ಯಕ್ಷ ಕೋಟೇಶ್ವರ ರಾವ್, ಎಂ. ರಾಮಾಂಜಿನೆಯುಲು, ಹಿರಿಯ ಪತ್ರಕರ್ತ ಜಿ. ಪ್ರಭಾಕರ್, ವೆಂಕಟೇಶುಲು, ವಲಿ ಅಹಮ್ಮದ್, ಶ್ರೀನಿವಾಸ್, ಕೆ. ರಾಮಾಂಜಿ ನೆಯುಲು, ಡಾ. ವೆಂಕಮಾಂಬ , ಮಲ್ಲಿಕಾರ್ಜುನ, ಭೀಮನೇನಿ ಭಾಸ್ಕರ್ ನಾಯುಡು, ಸುಬ್ರಮಣ್ಯ , ಗಂಗಣ್ಣ ಮುಂತಾದ ಕಲಾವಿದರು ಇದ್ದರು. ಇದೇ ಸಂದರ್ಭದಲ್ಲಿ  ನಾಗಭೂಷಣರನ್ನು ಮಿತ್ರರು, ಕಲಾವಿದರು ಅಭಿನಂದಿಸಿದರು.

Leave a Reply

Your email address will not be published. Required fields are marked *