ಅನುದಿನ ಕವನ-೧೩೮೧, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅವ್ವನಿಗೆ….

ಅವ್ವನಿಗೆ….

ಹುಲಿ ಮ್ಯಾಲೆ ಕುಂತವಳೆ
ನಂಗೆ ಭಯ!
ದುರು ದುರು ಅಂತ ನೋಡ್ತಾಳೆ
ನಂಗೆ ಭಯ!
ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆ
ನಂಗೆ ಭಯ!
ತ್ರಿಶೂಲ ಬೇರೆ ಅದೆ
ನಂಗೆ ಭಯ!

ನನ್ನ ಎತ್ಕೊ…
ಬಾಚಿ ತಬ್ಕೋ
ಅಂತ ಕೇಳೋಕೂ ಭಯ!

ಆದ್ರನೂ ಕೇಳ್ತೀನಿ
ಅವ್ವಾ ನಾ ನಿನ್ನ ಕೂಸು
ಒಮ್ಮೆ ಎತ್ಕೋ
ಒಂದೇ ಒಂದು ಸಲ
ನಿನ್ನ ಎದೆಗೆ ಒತ್ಕೋ….

ನಿನ್ನ ಹೆಗಲ ಮೇಲೆ ಹಾಕ್ಕೋ
ನಾ ಮಲಗ್ತೀನಿ
ಒಂದು ಮುತ್ಕೊಡು ಸಾಕು
ಜೀವಾನೇ ಬಿಡ್ತೀನಿ!

-ಸವಿತಾ ನಾಗಭೂಷಣ, ಶಿವಮೊಗ್ಗ

🍀💐ನವರಾತ್ರಿ ಹಬ್ಬದ ಶುಭಾಶಯಗಳು🍀💐

Leave a Reply

Your email address will not be published. Required fields are marked *