Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೩೮೦, ಹಿರಿಯ ಕವಿ: ಎಂ.ಎಸ್.‌ರುದ್ರೇಶ್ವರ ಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮೋಹದ ಹೆಂಡತಿ - Karnataka Kahale

ಅನುದಿನ ಕವನ-೧೩೮೦, ಹಿರಿಯ ಕವಿ: ಎಂ.ಎಸ್.‌ರುದ್ರೇಶ್ವರ ಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮೋಹದ ಹೆಂಡತಿ

ಮೋಹದ ಹೆಂಡತಿ…

ನಿನ್ನಲ್ಲಿರುವ ಗೋಲಿಗಳು
ಗಾಜಿನವು
ವಜ್ರದ ಹರಳುಗಳಲ್ಲ, ಎಂದರು ವಜ್ರ-
ದ ವ್ಯಾಪಾರಿಗಳು

ನನ್ನಲ್ಲಿರುವ ಗೋಲಿಗಳು
ನಾನು ನನ್ನ
ಬಾಲ್ಯದಲ್ಲಿ ಗೆಳೆಯರ ಜೊತೆ ಆಟವಾಡಿ,
ಸೋತುಗೆದ್ದು;

ಮನಸ್ಸಿನ ಮೂಲೆಯಲ್ಲಿ
ಬಚ್ಚಿಟ್ಟುಕೊಂಡ
ಅಪರೂಪದ ನೆನಪುಗಳು; ಈ ಗೋಲಿಗಳು
ವ್ಯಾಪಾರಿಗಳಿಗೆ ಗಾಜಿನವು.

ನನ್ನಲ್ಲಿರುವ ಗಾಜಿನ
ಗೋಲಿಗಳು
ನೆನಪಿನ ಲೋಕಕ್ಕೆ ಕರೆದೊಯ್ಯುವ
ಯಕ್ಷಿಣಿಗಳು…

-ಎಂ.ಎಸ್.‌ರುದ್ರೇಶ್ವರ ಸ್ವಾಮಿ, ಬೆಂಗಳೂರು
—–