Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ‌ ಕವನ-೧೪೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಕನ್ನಡವೆಂದರೆ.... - Karnataka Kahale

ಅನುದಿನ‌ ಕವನ-೧೪೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಕನ್ನಡವೆಂದರೆ….

ಕನ್ನಡವೆಂದರೆ….

ಕನ್ನಡವೆಂದರೆ
ಅದು ತೋಟದ ಹಾದಿ
ತುಳಿದಷ್ಟು
ಅಂಗಾಂಗ ಪುಳಕ
ಅನುಭವಿಸಿದಷ್ಟು
ನವರಸಗಳ ಜಳಕ

ಕನ್ನಡವೆಂದರೆ
ಅದು ನಿಸರ್ಗಧಾಮ
ಆಸ್ವಾದಿಸಿದಷ್ಟು.
ಕೋಗಿಲೆಗಳ ಇಂಪಿದೆ
ನಯನಿಸಿದಷ್ಟು
ನವಿಲುಗಳ ನಾಟ್ಯವಿದೆ.

ಕನ್ನಡವೆಂದರೆ
ಅಮ್ಮನ ಅಡಿಗೆಮನೆ
ಉಂಡಷ್ಟೂ
ರಸ ಕವಳದ ರುಚಿಯಿದೆ
ಕುಡಿದಷ್ಟೂ
ಅಮೃತದ ಸವಿ ಜೇನಿದೆ

ಕನ್ನಡವೆಂದರೆ
ಭಾಷೆ ಬರಹದ ಬೆಸುಗೆ
ನುಡಿದರೆ
ಅಕ್ಜರೆಯ ವಾಣಿ
ಬರೆದರೆ
ಅಕ್ಷರದ ರಾಣಿ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.