ಅನುದಿನ ಕವನ-೧೪೮೩, ಕವಯಿತ್ರಿ: ಪಿ ಕುಸುಮಾ ಆಯರಹಳ್ಳಿ, ಮೈಸೂರು

ಸರಳವಾಗಿ ಪ್ರೇಮಿಸೋಣ ಗೆಳೆಯ
ವಿಪರೀತ ನಾಟಕ,
ತೀವ್ರಭಾವುಕತೆ,
ಮುಗಿಯದ ಭರವಸೆ
ಬಲುದೂರದ ಯೋಜನೆಗಳು,
ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು,
ಯಾವುದಂದರೆ ಯಾವುದೂ ಬೇಡ
ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ
ಜೊತೆಗಿರುವಷ್ಟು ಹೊತ್ತೂ
ನಮ್ಮದು ಮಾತ್ರವೆನಿಸುವ ಸಮಯ
ಒಂದು ಗಾಢ ಅಪ್ಪುಗೆ.
ಕಣ್ಣ ಮಾತು. ಪರಸ್ಪರ ಕಾರುಣ್ಯ!
ಸಾಕಿಷ್ಟು.
ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ.
ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ!


-ಪಿ ಕುಸುಮಾ ಆಯರಹಳ್ಳಿ, ಮೈಸೂರು

Leave a Reply

Your email address will not be published. Required fields are marked *