Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೫೨೧, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಹಚ್ಚಡದವ್ವ - Karnataka Kahale

ಅನುದಿನ ಕವನ-೧೫೨೧, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಹಚ್ಚಡದವ್ವ

ಹಚ್ಚಡದವ್ವ

ಓ ಹಚ್ಚಡದವ್ವ ನೀನು
ಅವ್ವನಿಗೂ ಅವ್ವ!

ನನ್ನ ಹಚ್ಚಡದವ್ವ
ಹಾಸಿಗೆಯಲಿ ಮೈ ತಂಪು ತಬ್ಬಿ ಹಿತವಾಗಿ ಕಾವಿನಲ್ಲಿ ಸಂತೈಸುವಳು!

ಹಗಲು ಬೆಂದ ಅಪಮಾನಕೆ,
ಜನರ ಅನುಮಾನಕೆ ಇರುಳಿನಗೂಡ
ಸುರಿವ ಕಣ್ಣೀರು ಒರೆಸುವ ಅವ್ವ ನೀನು ನನ್ನ ಪ್ರೀತಿಯ ಹಚ್ಚಡವ್ವ!

ಗಂಡಿನ ಕ್ರೌರ್ಯಕೆ,ಬೀದಿ ನಾಯಿಗಳ ಆಕ್ರಮಣಕೆ ತುತ್ತಾದವಳ ದೇಹ ಸಿರಿಗೆ -ಹರಿದು ಚೆಲ್ಲಿದ ರಕ್ತದೋಕುಳಿಗೆ ಕಾರಿರುಳಿನಲಿ ಜೊತೆಯಾದ ಬೆಳಕಿನ ಅರಿವೆ.

ಕಾಸು ಕೊಟ್ಟನೋ, ಬಲಾತ್ಕರಿಸಿದನೋ. ಗಂಡಿನ ಕಬಂಧದಲಿ ನಲುಗಿ ದೇಹ ಕೆಟ್ಟರೂ ಮನದ ತಿಳಿಗೊಳದಲಿ ಅರಿವಿಲ್ಲದೇ ಹರಿವ ಬೆವರು ಹಿಂಗಿಸಲು ಮೈಯಪ್ಪಿದ ಅಮೃತಮತಿ ನೀನವ್ವ

ಅಂದು ದಾನವ್ವಗೂ ವರವಾದವಳು ಇಂದು ದುಃಸ್ವಪ್ನವಾಗಿ ಕಾಡುವ ಅವಿನೀತರ ಕಣ್ಣಿಂದ ಕಾಯುವವಳು‌ ನೀ ನನ್ನವ್ವ ಹಚ್ಚಡದವ್ವ!

ದೇಹಕ್ಕೆ ಹಿತವಾಗಿ ಮನಕೆ ಅವ್ವನ ಮಡಿಲಾಗಿ ನೀ ಸಂತೈಸದ ದಿನವಿಲ್ಲ…
ನಿನ್ನಾಲಿಂಗನದಲಿ ನೋವೆಲ್ಲಾ ಬಯಲು ಬೆಳಕು.
ನಿನ್ನಿರುವಿಕೆಯೇ ಕಾರಿರುಳಿಗೂ ಲಾಲಿ ಹಾಡು ನಿನ್ನಪ್ಪುಗೆಯಲಿ ನಖಶಿಖವೂ ಹಾಲುಜೇನು
ಆಲಾಪವೇ ಸ್ವರ್ಗಸುಖದ
ಲಾಲಿ ಹಾಡು ಅವ್ವಾ ಹಚ್ಚಡದವ್ವ.

ಡಾ. ಭಾರತಿ ಅಶೋಕ್, ಹೊಸಪೇಟೆ