ಹೊಸಪೇಟೆ: ಉದ್ಯಮಿ, ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಕೆ.ಬಿ.ಶ್ರೀನಿವಾಸ ರೆಡ್ಡಿಯವರ ನಗರದ ನೂತನ ನಿವಾಸ “ಇಂದ್ರ ಪ್ರಸ್ಥ” ಗೃಹ ಪ್ರವೇಶಕ್ಕೆ ಸುತ್ತೂರಿನ ಜಗುದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಂಗಳವಾರ ಬೆಳಿಗ್ಗೆ ಪಾದ ಪೂಜೆ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.
ಸೋಮವಾರ ರಾತ್ರಿ ಶ್ರೀನಿವಾಸ ರೆಡ್ಡಿಯವರ ನೂತನ ನಿವಾಸ ಇಂದ್ರಪ್ರಸ್ಥಕ್ಕೆ ಭೇಟಿ ನೀಡಿದ ಸುತ್ತೂರು ಶ್ರೀಗಳು, ನೂತನ ನಿವಾಸದಲ್ಲಿ ಆತಿಥ್ಯ ಸ್ವೀಕರಿಸಿದರು. ನಿವಾಸದಲ್ಲಿ ವಾಸ್ತವ್ಯ ಹೋಡಿದ್ದ ಶ್ರೀಗಳು ಬೆಳಿಗ್ಗೆ ಶಾಸ್ತ್ರೋಕ್ತವಾಗಿ ಇಷ್ಟ ಲಿಂಗ ಪೂಜೆಯ ನಂತರ, ಕೆ.ಬಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ಅವರ ಧರ್ಮಪತ್ನಿ ಕಾಂಗ್ರೆಸ್ ಮುಖಂಡರಾದ ರಾಣಿ ಸಂಯುಕ್ತಾ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ಧರ್ಮಪತ್ನಿ ನಾರಾ ವೈಜಯಂತಿ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರ ಪುತ್ರ ರಾಜವರ್ಧನ ರೆಡ್ಡಿ ಅವರು ಶ್ರೀಗಳಿಗೆ ಪಾದ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಪಾದ ಪೂಜೆ ಸ್ವೀಕರಿಸಿದ ಸುತ್ತೂರು ಶ್ರೀಗಳು ನೂತನ ನಿವಾಸದಲ್ಲಿ ವಾಸಿಸುವವರೆಲ್ಲರ ಮೇಲೆ ಬಸವಾದಿ ಪ್ರಮಥರ ಆಶೀರ್ವಾದ ಇರಲಿ ಎಂದು ಹಾರೈಸಿದರು.