ಅನುದಿನ ಕವನ-೧೬೧೬, ಕವಿ:ಅನಾಮಿಕ ಅನು: ಮಂಜುಳಾ ಕಿರುಗಾವಲು, ಮಂಡ್ಯ

ನಡೆ ಕೊಂಚವೇ ದೂರ
ಮೌನವಾಗಿ ಏನೂ ಹೇಳದೇ
ಅರಿಯದ ಹಾದಿಯಲ್ಲಿ
ಕಾಲು ನಡಿಗೆಯಲ್ಲಿ ಸಾಗಿ ಬಿಡೋಣ

ನಮ್ಮ ನಮ್ಮ ಒಂಟಿತನವನ್ನು ಹೊತ್ತು
ಸವಾಲುಗಳ ಎಲ್ಲೇ ಮೀರಿ
ಸಂಪ್ರದಾಯಗಳ ಗಡಿಯ ದಾಟಿ…
ನಾವು ಹೀಗೆಯೇ ಮೌನವಾಗಿ
ಸಾಗುತ್ತಲೇ ಇರೋಣ..

ನೀ ನಿನ್ನ ಗತದ ಕುರಿತು ಯಾವುದೇ ಪ್ರಸ್ತಾಪ ಮಾಡಬೇಡ..!
ನಾನು ಕೂಡ ಮರೆತಿರುವ ಯಾವುದೋ ಕವಿತೆಯ ಪುನರಾರ್ವತಿಸುವುದಿಲ್ಲ..!

ನೀನು ಯಾರು…?
ನಾನು ಹೇಗಿರುವೆ..?
ಈ ಎಲ್ಲಾ ಮಾತುಗಳನ್ನು ಬದಿಗಿರಿಸು
ಇಲ್ಲವೇ ಹಾಳು ಬಿದ್ದು ಹೋಗಲಿ ಬಿಡು..
ಏನೂ ಹೇಳುವುದು ಬೇಡ, ಕೇಳುವುದು ಬೇಡ..

ನಡೆ ಕೊಂಚವೇ ದೂರ
ಕಾಲು ನಡಿಗೆಯಲ್ಲಿ ಹೀಗೆಯೇ ಸಾಗಿ ಬಿಡೋಣ..

-ಅನಾಮಿಕ


ಅನುವಾದ- ಮಂಜುಳ ಕಿರುಗಾವಲು, ಮಂಡ್ಯ

Leave a Reply

Your email address will not be published. Required fields are marked *