ಬಾಳಲಿ ಇರಲಿ…..
ಕೋಪಕ್ಕಿರಲಿ ಬಡತನವು
ಪ್ರೀತಿಗೆಇರಲಿ ಸಿರಿತನವು
ಬದುಕಿಗೆ ಇರಲಿ ನಿನ್ನೊಲವು
ಬಾಳಲಿ ಇರಲಿ ನಗು ನಲಿವು
ಆಸೆಗೆ ಇರಲಿ ಇತಿಮಿತಿಯು
ಉಪಕಾರಕೆ ಇರಲಿ ತನು ಮನವು
ಬದುಕಿಗೆ ಇರಲಿ ನಿನ್ನೊಲವು
ಬಾಳಲಿ ಇರಲಿ ನಗು ನಲಿವು
ಹರಿಯುತಲಿರಲಿ ಜೀವನದಿಯು
ಸೇರಲಿ ನಲುಮೆಯ ಸಾಗರವು
ಬದುಕಿಗೆಇರಲಿ ನಿನ್ನೊಲವು
ಬಾಳಲಿ ಇರಲಿ ನಗು ನಲಿವು
ಬಾಯಲಿ ಇರಲಿ ನುಡಿಮುತ್ತು
ದೀನರಿಗಿರಲಿ ಕೈತುತ್ತು
ಬದುಕಿಗೆ ಇರಲಿ ನಿನ್ನೊಲವು
ಬಾಳಲಿ ಇರಲಿ ನಗು ನಲಿವು
-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ