ಅನುದಿನ‌ ಕವನ-೧೬೨೬, ಕವಯತ್ರಿ: ಡಾ. ಕೃಷ್ಣವೇಣಿ ಆರ್‌ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಸಂತಸದ ಇಳೆ

ಸಂತಸದ ಇಳೆ

ಬೀಳುತ್ತಿದೆ ಮಳೆ ಇಂದು
ಇದರ ಸ್ಪರ್ಶಕೆ ಮನ
ಉಯ್ಯಾಲೆಯಾಗಿ ತೊಯ್ದು
ವಾತಾವರಣದಿ ಜ್ವಾಲೆ
ಸದ್ದಿಲ್ಲದೇ ಮೈಯೊಳು
ಸುಳಿದಿದೆ….

ಈ ಭಾರೀ ಇಳೆಯ ಹನಿಗೆ
ಮೋಡವೆಲ್ಲ ಒದ್ದೆಯಾಗಿದೆ
ನೀಲಿ ಬಾನು ಸಂತೋಷದಿ
ಹಾರಾಡಿದೆ

ತಂಪಾದ ಪ್ರಕೃತಿ ಎದೆಯಲಿ
ಗೆಜ್ಜೆಯ ಸಜ್ಜು ಖುಷಿಯೊಳು
ಝಲ್ ಎನುತಿದೆ.
ನಿಲ್ಲದೇ ಬರುತ್ತಿದೆಯಲ್ಲ
ಸಿಹಿ ಮಳೆ ಇದಕೆ ಸಾಗರ
ಉಕ್ಕಿ ಮೇಲೆದ್ದು ಜಿಗಿಯುತಿದೆ.

ನೆಲದ ಹಸಿಗೆ ಪಾದ ಸಂಭ್ರಮದಿ ನಡೆಯುತಿದೆ
ಕಪ್ಪು ಛತ್ರಿಗಳ ಮಧ್ಯ ಚಿಗುರ
ಬೃಂಗಗಳು ಪ್ರೀತಿಯ ಓಡಾಟದೊಳು ಯಾರನ್ನು
ಲೆಕ್ಕಿಸದೇ ಚಲಿಸುತಿವೆ…

ಪ್ರಕೃತಿಯ ಮಹಿಮೆ
ಭುವಿಯ ತೃಷೆಯ
ಈಡೇರಿಸಿದೆ..
ಬೆಟ್ಟ, ಗುಡ್ಡ, ಗಿಡ, ಮರ
ತಂಬಿಟ್ಟು ತಿನ್ನುತ
ಜೋಕಾಲಿ ಆಡುತ್ತಿವೆ…

ತಂಪಾದ ಮಳೆಗೆ ಉತ್ಸವದ
ಉನ್ಮಾದ ಮಂಗಳ ಸ್ವರ
ಉತ್ಸಾಹದಿ ನಾದ ಗೈದಿದೆ..

ಇಳೆಯ ಮುತ್ತಿಗೆ
ಮರಗಳು ಪಾಚಿ ಹಿಡಿದು
ಹಸಿರುಟ್ಟ ಸೀರೆಯಂತೆ ಕಾಣುತಿವೆ..

ಹಳ್ಳ, ಕೊಳ್ಳಗಳು ಮೈತುಂಬಿ
ನೋಟವ ಸೌಂದರ್ಯಗೊಳಿಸಿವೆ
ಈ ವರಕೆ ಮಾನವ
ಮೌನದಿ ನಮಿಸಿ
ಪ್ರಕೃತಿಗೆ ವಂದಿಸಿ
ಕೈಂಕರ್ಯದಿ ಸಾಗುತ್ತಿದ್ದಾನೆ…


-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
—–

Leave a Reply

Your email address will not be published. Required fields are marked *