ಬಳ್ಳಾರಿ, ಸೆ.24: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಬುದ್ಧ (ಪ್ರದಾನ) ಕವಿಗೋಷ್ಠಿಗೆ ನಗರದ ಖ್ಯಾತ ಕವಿ ಹಾಗೂ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಂಜನಾಥ ಎಸ್. ಆಯ್ಕೆಯಾಗಿದ್ದಾರೆ. ಪಂಚ ಕಾವ್ಯದೌತಣ- ೨೦೨೫ರ ಮೈಸೂರು ದಸರಾದ ಮುಖ್ಯ ಆಕರ್ಷಣೆಯಾಗಿದ್ದು, ೨೩ ಮಂಗಳವಾರದಿಂದ ಆರಂಭಗೊಂಡು ೨೭ ಶನಿವಾರಕ್ಕೆ ಮುಕ್ತಾಯಗೊಳ್ಳುತ್ತದೆ. ಸೆ.27ರಂದು ಶನಿವಾರ ನಡೆಯುವ ಪ್ರಬುದ್ಧ ಕವಿಗೋಷ್ಠಿಯಲ್ಲಿ, ಮಂಜುನಾಥ ಅವರು, ಹಿರಿಯ ಸಾಹಿತಿ ಪ್ರೊ. ಮಲ್ಲಿಕಾ ಘಂಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸ್ವರಚಿತ ಕವನವನ್ನು ವಾಚಿಸಲಿದ್ದಾರೆ. ಇವರ ಆಯ್ಕೆಗೆ ಬಳ್ಳಾರಿ-ವಿಜಯನಗರ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಸಾಹಿತಿಗಳಾದ ಗಂಗಾಧರ ಪತ್ತಾರ್, ಅಜಯ್ ಬಣಕಾರ್, ಕೆ. ನಾಗರೆಡ್ಡಿ, ಅಬ್ದುಲ್ ಹೈ ತೋರಣಗಲ್ಲು ಅಭಿನಂದಿಸಿದ್ದಾರೆ. ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯಶವಂತ್ ಭೂಪಾಲ್, ಸಹಕುಲಾಧಿಪಾತಿಗಳಾದ ವೈ.ಜೆ.ಪೃಥ್ವಿರಾಜ್, ಅಮರ್ ರಾಜ್ ಭೂಪಾಲ್, ಕುಲಪತಿಗಳಾದ ಪ್ರೊ. ಟಿ.ಎನ್. ನಾಗಭೂಷಣ, ಕುಲಸಚಿವರಾದ ಪ್ರೊ.ಯು ಈರಣ್ಣ, ಕುಲಸಚಿವರು (ಮೌಲ್ಯಮಾಪನ) ಡಾ. ರಾಜು ಜಾಡರ್, ಹಣಕಾಸು ಅಧಿಕಾರಿ ನಮ್ರತಾ ಬಿ. ಯಾವಗಲ್ ಮತ್ತು ಎಲ್ಲಾ ಡೀನರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದ್ದಾರೆ.