ಬಳ್ಳಾರಿ, ಸೆ.29: ತಾಲ್ಲೂಕಿನ ಗೋಡೆಹಾಳು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಚಿದಾನಂದ ಅವಧೂತರು ವಿರಚಿತ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನಕ್ಕೆ ಚಾಲನೆ ನೀಡಲಾಯಿತು. ಪುರಾಣ ಪ್ರವಚನವನ್ನು ನಗರದ ನಿರೂಪಕ ಬಸವರಾಜ ಅಮಾತಿ ಅವರು, ಗಾಯನವನ್ನು ಮಧುಸೂದನ ಬಣಗಾರ, ಹೊಸಪೇಟೆ. ತಬಲಾ ಸಾಥಿಯನ್ನು ಯೋಗೀಶ ಬಣಗಾರ ಸಂಗನಕಲ್ಲು ಇವರು ನೆರವೇರಿಸಿದರು.
ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ದುರ್ಗಾಷ್ಟಮಿಯಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪುರಾಣ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಅ. 2 ರಂದು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಲಕ್ಷ್ಮೀಕಾಂತ ರೆಡ್ಡಿ, ಎರ್ರಿ ಬಸವನಗೌಡ, ಗ್ರಾಮಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಗೌಡ, ಪುರಾಣ ಕಮಿಟಿಯ ಸರ್ವ ಸದಸ್ಯರು, ಗೋಡೆಹಾಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
—–
