Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೭೩೫, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️, ಕವನದ ಶೀರ್ಷಿಕೆ: ಅಮ್ಮ - Karnataka Kahale

ಅನುದಿನ ಕವನ-೧೭೩೫, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️, ಕವನದ ಶೀರ್ಷಿಕೆ: ಅಮ್ಮ

ಅಡುಗೆ ಮನೆಯ ಬೇಲಿಯೊಳಗಿನ
ಪಾರಿಜಾತ,ಹೂ ಅಮ್ಮ

ಅಡುಗೆ ಮನೆಯ ಕಿಟಕಿಯಿಂದ
ಬೀಳುವ ಸೂರ್ಯನ ಹೊಂಗಿರಣಕೆ
ಸದ್ದಿಲ್ಲದೆ ಮುಂಜಾನೆ ಅರಳುತ್ತ,
ತಿಳಿಗಾಳಿಗೆ ಮೈಯೊಡ್ಡಿ
ಹಾರಲು ಶುರುಮಾಡುತ್ತಳೆ
ನವಿರಾದ ರೆಕ್ಕೆಬಿಚ್ಚಿ

ಉರಿವ ಒಲೆಯ ಬೆಂಕಿಗೆ
ಉಸಿರ ಊದುತ್ತ ಸ್ವರವಿರದ
ಕೊಳಲಾಗಿ ,
ಬೇಗೆಯಲ್ಲಿ ಬೆಂದು ಬಾಡಿದ
ಹೂವಾಗಿ

ಮೌನವಾಗುತ್ತಳೆ
ದಡಗುಟ್ಟುವ ಪಾತ್ರೆಗಳ ಅಪಸ್ವರದ ಸದ್ದಿಗೆ
ತಂತಿ ಹರಿದ ವೀಣೆಯಾಗಿ ,
ಅಲ್ಲಿಂದಿಲ್ಲಿಗೆ ಸುತ್ತಿ
ಅದೇ ಒಲೆಯ ಹೊಗೆಯ
ಮಕರಂದವ ಹೀರುತ್ತಾ ಕೂತು

ಮನೆಯ ತುಂಬೆಲ್ಲ ಘಮೆಂದು ಘಮಿಸುತ್ತಾಳೆ
ಶುಚಿಕರ ಅಡುಗೆಯೊಂದಿಗೆ
ಬೆವರ ಮಳೆಯಲಿ ಮಿಂದು
ಮಂದಹಾಸದಿಂದ ಮತ್ತೆ ಹೂವಾಗಿ ನಗುತ್ತ

ಹಸಿವು ನೀಗಿಸುತ್ತಾಳೆ
ಹಗಲು ರಾತ್ರಿ
ಅಡುಗೆ ಮನೆಯ ಬೇಲಿಯೊಳಗೆ
ಅಲೆದಾಡುತ್ತಾ…

-ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️
—–

ಅಮ್ಮನ‌ ಚಿತ್ರ: ಝಬೀವುಲ್ಲಾ ಎಂ ಅಸದ್,  ಹಿರಿಯೂರು