ಬಳ್ಳಾರಿ: ರಸ್ತೆ, ರೈಲ್ವೇ ಕೆಳ ಸೇತುವೆ ಕಾಮಗಾರಿಗೆ ಶಾಸಕ ನಾರಾ ಭರತರೆಡ್ಡಿ ಅವರಿಂದ ಭೂಮಿ ಪೂಜೆ

ಬಳ್ಳಾರಿ, ಅ.19: ನಗರದ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆ ಬಳಿ ಭಾನುವಾರ ಮಧ್ಯಾಹ್ನ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಅಂದಾಜು ವೆಚ್ಚ 2 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 19ರ ಸತ್ಯನಾರಾಯಣ ಪೇಟೆಯ ಕೂಲ್ ಕಾರ್ನರ್ ವೃತ್ತದಿಂದ ಇಂದಿರಾ ವೃತ್ತದವರೆಗೆ ರಸ್ತೆಯ ಎರಡೂ ಬದಿ ಪೇವರ್ ಅಳವಡಿಕೆ ಮತ್ತು ಸುಂದರೀಕರಣ ಹಾಗೂ ಸತ್ಯನಾರಾಯಣ ಪೇಟೆಯ ರೈಲ್ವೆ ಕೆಳ ಸೇತುವೆಯ ಅಭಿವೃದ್ಧಿ, ಸುಂದರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಅದೇ ರೀತಿ ವಾರ್ಡ್ ಸಂಖ್ಯೆ 21 ರ ವ್ಯಾಪ್ತಿಯ ಚೈತನ್ಯ ಕಾಲೇಜು ಹಿಂಭಾಗದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯೆ, ಮಾಜಿ ಮೇಯರ್ ಎಂ.ರಾಜೇಶ್ವರಿ, ಎಇಇ ಬಸವರೆಡ್ಡಿ, ಕಾಂಗ್ರೆಸ್ ಮುಖಂಡರಾದ ಪರಶುರಾಮ್, ಚಾನಾಳ್ ಶೇಖರ್, ಸುಬ್ಬರಾಯುಡು, ತಲಪುರಿ ಪದ್ಮಾ, ರಾಜು, ರಘು, ವಿಜಯ ಸೇರಿದಂತೆ ಹಲವರು ಹಾಜರಿದ್ದರು.