Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೭೬೫, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ:ತಂಗಾಳಿಯಾಗಿ ತೀಡಿ ಬಾ...! - Karnataka Kahale

ಅನುದಿನ ಕವನ-೧೭೬೫, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ:ತಂಗಾಳಿಯಾಗಿ ತೀಡಿ ಬಾ…!

ತಂಗಾಳಿಯಾಗಿ ತೀಡಿ ಬಾ…!

ನಿನ್ನ ನೆನಪುಗಳು
ಕಾರ್ಮೋಡದಂತೆ
ಹೃನ್ಮನವ ಆವರಿಸಿದಾಗಲೆಲ್ಲ
ನಾ ನನಗಾಗಿ
ಕಂಬನಿಯ ಹನಿಸಿ
ಮಳೆಯಾಗುತ್ತೇನೆ ನಲ್ಲ..!

ಹರಿದು ಹಗುರಾದೆ
ಎನಿಸಿದರೂ ಆಗ
ಕ್ಷಣದೆ ಹೃದಯವೇ ಬಲುಭಾರ
ಹೆಚ್ಚುವುದು ಮತ್ತೆ
ನಿನ್ನ ಸೇರಬೇಕೆಂಬ
ಆಸೆಯೊಂದು ಮನದ ಪೂರಾ

ನೋವನ್ನಡಗಿಸಿ
ನಗುವೊಂದನೇ ಚೆಲ್ಲಿ
ನಾನ್ನೊಬ್ಬಳೇ ಹೇಗಿರಲಿ ಹೇಳು
ನರಳುತಿರುವೆ
ನೀನಿರದೇ ನೋಡು
ಸಹಿಸುತಲಿ ಈ ವಿರಹದ ಬಾಳು

ಹಾಗೋ ಹೀಗೋ
ಹೇಗೋ ತಂಗಾಳಿಯಾಗಿ
ತೀಡಿ ಬಾ..! ನೀನೊಮ್ಮೆ ಬಳಿಗೆ
ಕಾದಿರುವೆ ಕಾತರಿಸಿ
ನೀ ಸನಿಹ ಸರಿದು
ಹಿತ ತರುವ ಮಧುರ ಘಳಿಗೆಗೆ

✍️ಬಿಂದು ಪಿ ಗೌಡ, ಹೊನ್ನಾವರ.                                 —–