‘ಬರವಣಿಗೆ ಕೌಶಲ್ಯ ಕರಗತ ಮಾಡಿಕೊಳ್ಳಿ’ ಡಾ.ಎಸ್‌.ವೈ.ಸೋಮಶೇಖರ್‌ ಸಲಹೆ

ತೆಕ್ಕಲಕೋಟೆ: ಪತ್ರಿಕೋದ್ಯಮದಲ್ಲಿ ಬರವಣಿಗೆ ಮಹತ್ವವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್‌.ವೈ.ಸೋಮಶೇಖರ್‌ ಹೇಳಿದರು.
ಹಂಪಿಯ ಕನ್ನಡ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಟಿವಿ ಬರವಣಿಗೆ, ನಿರೂಪಣೆ ಹಾಗೂ ಟಿವಿ ಕಾರ್ಯಕ್ರಮ ನಿರ್ಮಾಣ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬರೆಯುವ ಮೊದಲು ಅಧ್ಯಯನ ಅಗತ್ಯ. ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಟಿವಿ ವೀಕ್ಷಿಸಬೇಕು, ರೇಡಿಯೊ ಆಲಿಸಬೇಕು, ಪತ್ರಿಕೆಗಳನ್ನು ಓದಬೇಕು. ದಿನಾಲೂ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಪತ್ರಿಕೆ ಮತ್ತು ಟಿವಿ ಬರವಣಿಗೆಯಲ್ಲಿ ಬಹಷ್ಟು ವ್ಯತ್ಯಾಸ ಇದೆ. ಪತ್ರಿಕೆ ಬರವಣಿಗೆಯಲ್ಲಿ
ಅಕ್ಷರ ಮಾತನಾಡಿದರೆ, ಟಿವಿಯಲ್ಲಿ ದೃಶ್ಯ(ವೀಡಿಯೊ) ಗಳು ಮಾತನಾಡುತ್ತವೆ. ಹೀಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಎರಡು ಮಾಧ್ಯಮಗಳ ಬರಣಿಗೆ ಬಗ್ಗೆ ತಿಳಿದು ಕೊಳ್ಳಬೇಕು. ಜೀವನದಲ್ಲಿಸಿಕ್ಕ ಅವಕಾಶವನ್ನು ಸಮರ್ಪಕ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಅಧ್ಯಾಪಕಿ ಪದ್ಮಾವತಿ ಕೆ.ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿದ್ದು, ಓದುವ ಸಂದರ್ಭದಲ್ಲಿ ಚೆನ್ನಾಗಿ ಓದಬೇಕು. ಪ್ರತಿಯೊಂದು ವಿಷಯದ ಮಾಹಿತಿ ಪಡೆದುಕೊಳ್ಳಬೇಕು. ಮಾಧ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಂದು ತಿಳಿಸಿದರು.
ಅಧ್ಯಯನ, ಭಾಷಾ ಜ್ಞಾನ, ಬರವಣಿಗೆ, ನಿರೂಪಣೆ, ಭಾಷಾಂತರ ಕಲೆ, ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀಮತಿ ವರಲಕ್ಷ್ಮಿ, ಡಾ.ರಾಜಣ್ಣ .ಡಿ ಹಾಗೂ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
—–

ಆಕಾಶವಾಣಿ ಕೇಂದ್ರಕ್ಕೆ ಭೇಟಿ
ಹೊಸಪೇಟೆಯಲ್ಲಿರುವ ಆಕಾಶವಾಣಿ ಕೇಂದ್ರಕ್ಕೆ ತೆಕ್ಕಲಕೋಟೆಯ ಶ್ರೀಮತಿ ಹೊನ್ನುರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿ, ಸುದ್ದಿ ಬರವಣಿ, ಕೇಂದ್ರದ ಬಗ್ಗೆ ಮಾಹಿತಿ ಪಡೆದುಕೊಂಡರು. ಆಕಾಶವಾಣಿ ಕೇಂದ್ರದ ನಿರ್ದೇಶಕರಾದ
ಶ್ರೀ ನಾಗೇಂದ್ರ ಅವರು ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿರುವ ಎಲ್ಲವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.