ಆಘಾತ
ಆಚೆ ಈಚೆ ಗುಂಪು
ಸ್ಥoಭಗಳು ಒದ್ದಾಡುತ್ತಿವೆ
ನಿಲ್ಲದೇ ಬಿದ್ದ ಬಡ ಕಾರ್ಯದ
ಕೈಗಳೆತ್ತಲು..
ಇದರ ಕುತಂತ್ರಕ್ಕೆ
ಕಣ್ಣಿದ್ದು ಕುರುಡಾಗಿ ಸುಮ್ಮನೆ
ಕಿವಿಗಳು ಆಶ್ವಾಶನೆಯ ಬೇರೊಳು ಸಿಕ್ಕಿ ಅನ್ನ್ಯಾಯದ
ಛಾಯ ಚಿತ್ರಕ್ಕೆ ಮಲಗಿದ್ದ ದಿಂಬು ಹಾಸಿಗೆ ನಿಟ್ಟುಸಿರು ಬಿಡುತ್ತಿದೆ….
ಭವ್ಯ ಭರತ ರಾಟೆಯೊಳು
ಮನ ಬಂದ ಕ್ರೂರ ವೇದಿಕೆ
ಸಿದ್ಧಾಂತಗಳು ಅಘೋರ
ಗದ್ದಲಬ್ಬಿಸಿ ಗೆದ್ದಿಲುಗಳ
ಸೃಷ್ಟಿ ಮಾಡುತಿವೆ…
ಈ ರಾಜಕೀಯ ದಿ ಕಲ್ಲು ತೂರಾಟ ನೂಕು ನುಗ್ಗುಲೊಳು
ತೊಡರಿಲ್ಲದೆ ಬೀಳುತಿವೆ
ಅದರೊಳು ಸತ್ಕಾರದ
ಸುವಾಸನೆ ಹೂವಿನ ಹಾರೆದೊಳು ಬೀರುತಿದೆ…
ಇದು ವ್ಯವಸ್ಥೆ ಯ ವ್ಯಂಗ್ಯ
ವಿಡಂಬನೆ ಯೋ ಕಾಣೆ?
ಕೊನೆಗಾಣದ ನ್ಯಾಯದೊಲುಮೆ ಸತ್ತ ಬಡಬಟ್ಟೆಯ ನೋಡುತ
ಕಂಬನಿಗೈದಿದೆ….
ವಿಧಿಯ ಬೀದಿಯಲಿ ಏನೆಲ್ಲ
ಇಬ್ಭಾ ಗದ ರೇಖೆ ಯಲ್ಲವೇ?
ಸೃಷ್ಟಿ ಸುವ ಮಾತಿನೊಳು ಬಿಗಿಯಿಲ್ಲದ ಉಚ್ಚಾರ
ವೈದ್ದವ್ಯದ ಬಿಳಿ ಬಟ್ಟೆಗೆ
ಸಾಂತ್ವನದ ತೋರಿಕೆ….
ಇನ್ನೆಲ್ಲಿದೆ ಐಕ್ಯತೆ ಯ ಹೊನಲು ರಾಷ್ಟ್ರ ರಾಜಕಾರಣಕೆ
ಚಾಕು ಚೂರಿ ಚೈನು ಕೋಲುಗಳು ಎದ್ದು ನಿಂತಿವೆ
ನೆಲೆಗಾಣದ ಶಕ್ತಿ ಹಗಲಿರುಳು
ಹೋರಾಡಿ ಕತ್ತಲ ಬೆಳಕಿನೊಳು
ಸೋಲುತಿದೆ
ಪೂರ್ಣ ವಿರಾಮ ವಿಲ್ಲದ
ಅಂತ್ಯಕೆ ಮಾಗಿದ ಚಾಳೀಶು
ಮೌನವಾಗಿ ಕುಳಿತಿದೆ….

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
