ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ: ಸಮಾಜದ ಮುಖಂಡರಿಂದ ವೃತ್ತ ವೀಕ್ಷಣೆ

ಬಳ್ಳಾರಿ, ನ.29:  ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ  ಬರುವ  ಜ 3ರಂದು ನಡೆಯಲಿರುವ ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯನ್ನು ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರ ಹಾಗೂ ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಶನಿವಾರ ಬೆಳಿಗ್ಗೆ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿ ಪುತ್ಥಳಿ ಸ್ಥಾಪನೆಯಾಗುವ ವೃತ್ತದ ಕಾಮಗಾರಿಯನ್ನು ವೀಕ್ಷಿಸಿದರು.

ಇದಕ್ಕೂ ಮುನ್ನ ಹಾಲಿ ಇರುವ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.

ಸ್ಥಳ ವೀಕ್ಷಣೆಯ ಬಳಿಕ ಸಭೆ ನಡೆಸಿ ಜ.03, 2026ರ ಪುತ್ಥಳಿಯ ಅನಾವರಣ ಕಾರ್ಯಕ್ರಮ, ಪುತ್ಥಳಿಯ ಸ್ವಾಗತ, ವೇದಿಕೆ ಕಾರ್ಯಕ್ರಮ, ಪ್ರಚಾರ ಕಾರ್ಯ ಸೇರಿದಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಇರುವ ಅಂಶಗಳ ಕುರಿತು ಸಭೆಯಲ್ಲಿ ಹಾಜರಿದ್ದ ವಾಲ್ಮೀಕಿ ನಾಯಕರ ಸಮುದಾಯದ ಮುಖಂಡರು ಸಲಹೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ಸದಸ್ಯ ಹನುಮಂತಪ್ಪ ಮಾತನಾಡಿ,  ಪಕ್ಷಾತೀತವಾಗಿ ಎಲ್ಲರೂ ಈ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಜೊತೆಗೆ ಎಲ್ಲ ಪಕ್ಷಗಳಲ್ಲಿರುವ ಹಾಲಿ, ಮಾಜಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದರು.

ಕಾರ್ಯಕ್ರಮಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ, ನಗರದ 39 ವಾರ್ಡುಗಳು ಹಾಗೂ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮಾಜದ ಜನರಿಗೆ ಆಹ್ವಾನ ನೀಡುವ ಬಗ್ಗೆ ನಾವೆಲ್ಲ ಕಾರ್ಯ ಪ್ರವೃತ್ತರಾಗೋಣ ಎಂದು ಪರಶುರಾಮ (ಪರಶಿ) ಅವರು ಹೇಳಿದರು.

ಯುವ ಮುಖಂಡರಾದ ಸಂಗನಕಲ್ಲು ವಿಜಯ ಕುಮಾರ್, ಹೊನ್ನೂರಪ್ಪ, ಲೋಕೇಶ್, ಟಿ.ಹೆಚ್.ಚರಣರಾಜ್ ಅವರು ಈವರೆಗೆ ಪೂರ್ವಭಾವಿ ಸಭೆಗಳಲ್ಲಿ ಆಗಿರುವ ತೀರ್ಮಾನ, ಮುಂದೆ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ಹಾಜರಿದ್ದವರಿಗೆ ಮಾಹಿತಿ ನೀಡಿದರು.

ಸಮಾಜದ ಹಿರಿಯ ಮುಖಂಡ,  ಮಾಜಿ ನಗರಸಭೆ ಸದಸ್ಯ ರಾಮಣ್ಣ ಗುಮನೂರ್, ಹಿರಿಯ ಮುಖಂಡರಾದ ಕೆಇಬಿ ರುದ್ರಪ್ಪ, ಪಿ. ಜಗನ್ನಾಥ, ಪತ್ರಕರ್ತರಾದ ಕೆ. ಮಲ್ಲಯ್ಯ, ಗೋರಯ್ಯ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷರಾದ ಟಿ. ಮಲ್ಲಿಕಾರ್ಜುನ, ಶಾನವಾಸಪುರ ದೊಡ್ಡ ಎರ್ರೀಸ್ವಾಮಿ, ಪರಶುರಾಮಡು, ಹಗರಿ ಗೋವಿಂದ, ವಿ.ಎನ್. ಶ್ರೀನಾಥ್ ಎಸ್ಪಿ ಸರ್ಕಲ್ ಮಲ್ಲಿಕಾರ್ಜುನ, ದೇವಿನಗರ ಸುಧಾಕರ್, ಬಾಲರಾಜ್, ಕೊಳಗಲ್ಲು ಶಿವಾನಂದ, ಶೇಖರ್, ಕಾಕರ್ಲತೋಟ ರವಿ, ಹಮಾಲಿ ಸುಂಕಣ್ಣ, ವಕೀಲ ಕಿಶೋರ್, ರಾಮುಮೂರ್ತಿ, ಕೆ.ಕೆ. ಹಾಳ್ ಸತ್ಯನಾರಾಯಣ, ಕೆಕೆ ಹಾಳ್ ದುರ್ಗಣ್ಣ, ಚಳ್ಳಗುರ್ಕಿ ಕುಬೇರ್, ಹವ್ವಂಬಾವಿ ಲೋಕೇಶ್, ಗಂಗಾಧರ, ಸಂಗನಕಲ್ಲು ವಿಜಯಕುಮಾರ್, ಸಂಗನಕಲ್ಲು ರಮೇಶ್, ಬಜ್ಜಪ್ಪ, ಮೋಹನ್, ರಾಘವೇಂದ್ರ, ರಾಮು, ಮಚ್ಚಾ ಪ್ರಸಾದ್, ಸುಧಾಕರ್, ಭವಾನಿ ಪ್ರಸಾದ್, ಜಗದೀಶ್, ಟಿಎಂಜಿ ಗಂಗಪ್ಪ, ಎರಗುಡಿ ಸೋಮಣ್ಣ, ಬಸರಕೋಡು ಗೋವಿಂದ, ಶ್ರೀಶೈಲ,ಯರಗುಡಿ ರಮೇಶ್, ವಣೀನೂರು ಶ್ರೀನಿವಾಸ, ಬೆಣಕಲ್ ಸುರೇಶ್, ಮೀನಹಳ್ಳಿ ಪಾಲಾಕ್ಷಿ,ನರೇಂದ್ರ ಬಯಲೂರು ಶೇಖಣ್ಣ, ಸಂಗನಕಲ್ಲು ಟಿ.ಹೊನ್ನೂರಪ್ಪ, ಲಾಲು ಸ್ವಾಮಿ, ಜಗದೀಶ್, ಚಿನ್ನಾ ಇದ್ದರು.