ಹೊಸ ವರುಷ ಬದಲಾಗಬೇಕು ನಾವು-ನೀವು…
ನಾಳೆ ಮುಂಜಾನೆಗೆ ಹುಟ್ಟುವ ಸೂರ್ಯ
ಅದೇ ಬೆಳಕ ನೀಡುತ್ತಾನೆ
ಹೊಸತನೇನು ಕೊಡುವುದಿಲ್ಲ
ಅದೇ ಬೆಳಕು ಕತ್ತಲ ನಿತ್ಯವೂ ದೂಡುತ್ತದೆ
ಹಾಗೆ ನಾಳೆಗೂ ಕೂಡ
ಅದೇ ಬೆಳಕು ಕತ್ತಲ ಕುಡಿದು
ಬೆಳಕ ಆವರಿಸುತ್ತದೆ…
ಕ್ಯಾಲೆಂಡರ್ ತಿರುವಿದ ಮಾತ್ರಕ್ಕೆ
ಏನು ಬದಲಾಗುವುದಿಲ್ಲ
ಬದಲಾಗಬೇಕಾದದ್ದು ನಾವು ಮತ್ತು ನೀವು
ಪ್ರತಿ ದಿನ ಪ್ರತಿ ಕ್ಷಣ
ನಮಗೆ ಜೀವನ ಹೊಸತಾಗೆ ಇರಬೇಕು
ಬದಲಾದ ಇಸವಿಯ ನೋಡುತ್ತ
ಆಕಾಶಕ್ಕೆ ಬಣ್ಣದ ಪಟಾಕಿ ಸಿಡಿಸಿ
ಸಂಭ್ರಮಿಸುವುದಲ್ಲ ಹೊಸ ವರುಷ
ಸಾಧನೆಯ ಉತ್ತುಂಗದ ತುದಿಯಲ್ಲಿ ನಿಂತು
ನಿತ್ಯವು ಸಮಾಜಮುಖಿಯಾಗಿ ಬದುಕಿದರೆ
ಅದುವೆ ನಮಗೆ ನಿತ್ಯವೂ ಹೊಸ ವರುಷ ಹರುಷ…

-ಸಿದ್ದು ಜನ್ನೂರ್, ಚಾಮರಾಜನಗರ
—–
