ನೀನಂದುಕೊಂಡ ಹಾಗೆ
ನಾನಂದುಕೊಂಡ ಹಾಗೆ
ಬದುಕು ಸಾಗುವುದಿಲ್ಲ,
ಬದುಕು ಸಾಗುವ ಹಾದಿಯಲ್ಲಿಯಲ್ಲಿಯೇ ನಾವು ಸಾಗಬೇಕು,
ಬದುಕೆಂಬ ಸುನಾಮಿಯ ಚಿತ್ತ
ಎತ್ತ ವಾಲುವುದೇನೋ,
ಹಣೆಬರಹವೋ
ವಿಧಿಬರಹವೋ
ಮನಗಳ ತಾಕಲಾಟವೋ
ಮನಗಳ ಬಯಕೆಗಳೋ
ಏನೋ ಏನೇನೋ
ಹೆಸರುಗಳು ಸಾವಿರಾರು,
ಅರ್ಥವಾಗದ ಪಯಣವೀ
ಬದುಕು

-ಮಹಿಮ, ಬಳ್ಳಾರಿ
—–
