ಡಾ. ಬರಗೂರು‌ ಅವರ ಸೌಹಾರ್ದ ಭಾರತ ಅನನ್ಯ ಕೃತಿ -ಕುಲಸಚಿವ ಎ.ಎಲ್. ಮಂಜುನಾಥ್

ಶಂಕರ ಘಟ್ಟ (ಶಿವಮೊಗ್ಗ):  ಜಾತಿ ಜಾಡ್ಯದಲ್ಲಿ, ಮತೀಯ ಮೌಢ್ಯದಲ್ಲಿ ತಲ್ಲಣಿಸುತ್ತಿರುವ ಜನತೆಗೆ ನಿಜ ದಾರಿ ತೋರಿಸುತ್ತಿರುವ ಅಪರೂಪದ ಚಿಂತಕರು ಡಾ. ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಕೃತಿ ಅನನ್ಯವಾದುದು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.                                          ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯಸಂಘ ಏರ್ಪಡಿಸಿದ್ದ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.                                      ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ನೌಕರೆಲ್ಲ ಓದಬೇಕೆಂದು ಸಲಹೆ ನೀಡಿದರು. ಇಲ್ಲಿನ ಲೇಖನಗಳನ್ನು ಓದಿ ಮನನ ಮಾಡಿಕೊಂಡಾಗ ವ್ಯಕ್ತಿ ಮತ್ತು ಸಮಾಜ ಶಾಂತಿಯಿಂದ ಸಹಬಾಳ್ವೆ ಸಮಾನತೆಯಿಂದ ಬಾಳಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ ಪ್ರಶಾಂತ ನಾಯಕ ಅವರು ಬರಗೂರು ಅವರು ಕರ್ನಾಟಕ ಸಂಸ್ಕೃತಿಯ ಮೇಷ್ಟ್ರು. ಅವರು ಸಮಸಮಾಜದ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕೃತಿ ಕುರಿತು ಮಾತನಾಡಿದ ಕನ್ನಡಭಾರತಿ ನಿರ್ದೇಶಕ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಇಂದು ನಿನ್ನೆ ನಾಳೆಗಳ ಗರ್ಭದಲ್ಲಿ ಮಾನವೀಯತೆಯ ಸಸಿ ಬೆಳೆಸಿ, ನೂರು ಹೃದಯದಿ ನೆಟ್ಟು ಮರವಾಗಿಸುವ ಹಂಬಲ ಈ ಕೃತಿಗಿದೆ ಎಂದು ಹೇಳಿದರು.
ಡಾ ಮುತ್ತಯ್ಯ ಅವರು ಮಾತನಾಡಿ ಈ ಕೃತಿಯ ವಿಚಾರಗಳನ್ನು ಅರ್ಥ ಮಾಡಿಕೊಂಡು ಅನುಸರಿಸ ಬೇಕು ಎಂದು ಅಭಿಪ್ರಾಯಪಟ್ಟರು.                                        ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ ನಿರಂಜನ ಪಿ. ಅವರು ಉಪಸ್ಥಿತರಿದ್ದರು.
ಬಾ. ಪುರುಷೋತ್ತಮ ಪ್ರಾರ್ಥಿಸಿದರು.  ಡಾ ನವೀನ್ ಸ್ವಾಗತಿಸಿದರು ಡಾ ಹಾ.ಮ.ನಾಗಾರ್ಜುನ ವಂದಿಸಿದರು.ಡಾ ರವಿ ನಾಯ್ಕ ನಿರೂಪಿಸಿದರು.