ಅನುದಿನ ಕವನ-೧೮೭೨, ಕವಿ:ಸದಾಶಿವ ಸೊರಟೂರು, ಹೊನ್ನಾಳಿ

ಪ್ರೇಮಿಗಳ ದಿನಾಚರಣೆ ಯ ಶುಭಾಶಯಗಳು🍀🌺🍀💐

ಚಿಂತಿಸಬೇಡ
ನಾನು ಅಥವ ನೀನು
ಇಲ್ಲವಾದ ಮೇಲೂ
ಇಲ್ಲೇ ಆಡಿಕೊಂಡಿರುತ್ತದೆ
ಈ ಪ್ರೀತಿ

ಕೊನೆಗೆ
ನಿನ್ನದೊ ನನ್ನದೊ ಯಾತ್ರೆ
ಯಾರಿಗೊತ್ತು..?

ಆಗಲೂ ಬರುವುದಿಲ್ಲ
ಅದು ಹೀಗೆ
ಜೊತೆಗೆ

ಯಾವುದೊ ಬೇರಿನಲಿ
ನುಗ್ಗಿ
ಹೂವಾಗುತ್ತದೆ
ಯಾವುದೊ ಹನಿಯ ಜೊತೆ
ಸೇರಿ ಮಳೆಯಾಗುತ್ತದೆ
ಹಾಗೂ
ಯಾವುದೊ ಕಲ್ಲಿನಲಿ
ಅವಿತು
ದೇವರೇ ಆಗಿ ಬಿಡುತ್ತದೆ..

-ಸದಾಶಿವ ಸೊರಟೂರು,ಹೊನ್ನಾಳಿ

ಗಿಳಿ ಚಿತ್ರ: ಸಿದ್ಧರಾಮ ಹಿರೇಮಠ, ಕೂಡ್ಲಿಗಿ