ಬೆಳಗಟ್ಟ(ಚಿತ್ರದುರ್ಗ ಜಿ.), ಫೆ.19: ಭಕ್ತಿ ನಂಬಿಕೆ ಆಧಾರಿಸಿದೆ. ಭಗವಂತನ ದರ್ಶನದ ಸಾಧನ ಭಕ್ತಿ. ಈ ಭಕ್ತಿಯಲ್ಲಿ ಶಕ್ತಿ ಅಡಗಿದೆ ಎಂದು ಆಂಧ್ರಪ್ರದೇಶದ ಉರವಕೊಂಡ ಜಗದ್ಗುರು ಡಾ. ಕರಿಬಸವೇಶ್ವರಾಜೇಂದ್ರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗ ಸಮೀಪದ ಬೆಳಗಟ್ಟದಲ್ಲಿ ಏರ್ಪಡಿಸಿದ್ದ 25ನೇ ವರ್ಷದ ಮಹಾರಥೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಆಶೀರ್ವಚನ ನೀಡಿದ ಶಿವಾಲಿಂಗಾನಂದಸ್ವಾಮಿಗಳು ಮಹಾ ಭಕ್ತೆ ಮಹದೇವಮ್ಮ ಅವರು ಆಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಸಾಧಕರು. ವ್ಯಕ್ತಿ ಮತ್ತು ಸಮಾಜದ ಸುಧಾರಣೆಗೆ ಸಂಪೂರ್ಣ ಸಮರ್ಪಿಸಿಕೊಂಡವರು. ಮಹದೇವಮ್ಮ ಬದುಕು ಆದರ್ಶ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಘುಮೂರ್ತಿ ಅವರು ಮಹದೇವಮ್ಮ ಅವರ ಸಾಧನೆಯ ಮಹತ್ವವನ್ನು ತಿಳಿಸಿದರು. ಪೂಜ್ಯ ಶ್ರೀ ಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ ನಾಗೇಂದ್ರ ಆಚಾರ್ಯ, ಸಾಹಿತಿ ಯುಗಧರ್ಮ ರಾಮಣ್ಣ , ಕುವೆಂಪು ವಿವಿ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ ಪುರುಷೋತ್ತಮ ಪ್ರಾರ್ಥಿಸಿದರು. ಟಿ. ನಾಗೇಶ್ ಸ್ವಾಗತಿಸಿದರು. ಸೋಮೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
