ಅನುದಿನ ಕವನ-೧೮೭೬, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಮೌನದ ನಂತರ…

ಒಂದು ಮೌನದ ನಂತರ…

ಬಯಲಲ್ಲಿ ಗೋಡೆ ಎಬ್ಬಿಸಿ
ಮನೆ ಕಟ್ಟುವುದನ್ನು
ಕಲಿತೆವು.

ಜಿಜ್ಞಾಸೆಯ ಬೆಳಕಲ್ಲಿ
ಬದುಕು
ಪ್ರೀತಿ, ಆತ್ಮೋದ್ಧಾರ ಕುರಿತು
ಮಾತಾಡಿದೆವು.

ನಾಗರೀಕತೆ ಬೆಳೆದಂತೆ
ಸಂಸ್ಕೃತಿ
ಸಂಸ್ಕಾರ ಹೂವಾಗಿ
ಅರಳಬೇಕಿತ್ತು.

ನದಿ ಹರಿದ ಹಾಗೆ; ನೆರಳು
ಹಿಡಿಯಲು-
ಹೊರಟು, ಬಲೆಯಲ್ಲಿ
ಸಿಲುಕಿಕೊಂಡೆವು.

ಮನಸುಗಳ
ನಡುವೆ ಗೋಡೆ ಕಟ್ಟುವ
ಕೌಶಲ್ಯ ಬಲ್ಲೆವು.
ಈಶ್ವರ ಅಲ್ಲಾ ತೇರೋ ನಾಮ್
ಮರೆತೆವು.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು