
ಶಂಕರಘಟ್ಟ(ಕುವೆಂಪು ವಿವಿ), ಏ.14:ವಿಶ್ವ ಜ್ಞಾನಿ ಬಾಬಾಸಾಹೇಬ ಅಂಬೇಡ್ಕರ್ ಅವರು ಮಾಡಿರುವ ಅಧ್ಯಯನ ಮಾದರಿಯಾದುದು. ಅವರಂತೆ ಅಧ್ಯಯನಶೀಲರಾಗಬೇಕೆಂದು ಪರೀಕ್ಷಾಂಗ ಕುಲಸಚಿವ ಪ್ರೊ ಆರ್. ತಿಮ್ಮರಾಯಪ್ಪ ಅವರು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ ಅಂಬೇಡ್ಕರ್ ಅಧ್ಯಯನ ಕೇಂದ್ರವು ಬಸವ ಭವನದಲ್ಲಿ ಏರ್ಪಡಿಸಿದ್ದ 135ನೇ ಅಂಬೇಡ್ಕರ್ ಜಯಂತಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹಗಲಿರುಳು ಎನ್ನದೆ ದೇಶದ ಹಿತಕ್ಕಾಗಿ ಓದಿದವರು. ಇಡೀ ಜಗತ್ತಿನಲ್ಲಿ ಅವರಷ್ಟು ಅಧ್ಯಯನ ಮಾಡಿದವರು ಮತ್ತೊಬ್ಬರಿಲ್ಲ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕಲಾ ನಿಕಾಯದ ಡೀನರಾದ ಪ್ರೊ.ಚಂದ್ರಶೇಖರ್ ಅವರು, ಅಂಬೇಡ್ಕರ್ ಅವರು ವ್ಯಕ್ತಿಯಲ್ಲ ಅವರೊಂದು ಮಹಾನ್ ಶಕ್ತಿ. ಸರ್ವರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡಿದವರು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳನ್ನು ರೂಪಿಸಿಕೊಟ್ಟವರು ಎಂದು ತಿಳಿಸಿದರು.
ಪ್ರೊ.ದೇವಿದಾಸ ಅವರು ಬಾಬಾಸಾಹೇಬರ ಕುರಿತ ಕವನ ವಾಚಿಸಿ ಗಮನ ಸೆಳೆದರು. ಡಾ ವಾಲ್ಮೀಕಿ, ಡಾ ರಾಜಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ನವೀನ್ ಮಂಡಗದ್ದೆ ಸ್ವಾಗತಿಸಿದರು. ರಂಗಸ್ವಾಮಿ ವಂದಿಸಿದರು.
ಓಬಳೇಶ್ ಟಿ. ನಿರೂಪಿಸಿದರು.
