ಶಂಕರಘಟ್ಟ(ಶಿವಮೊಗ್ಗ ಜಿ.): ಹಳೆಗನ್ನಡ ಸಾಹಿತ್ಯ ಭಾಷೆಪ್ರೌಢಿಮೆ, ಭವ್ಯತೆ, ಗಂಭೀರತೆ ಮತ್ತು ಉದಾತ್ತ ಮೌಲ್ಯಗಳಿಂದ ಕೂಡಿದೆ ಎಂದು ಡಾ ಪ್ರಶಾಂತ್ ನಾಯಕ ಅವರು ಅಭಿಪ್ರಾಯಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹಳಗನ್ನಡ ಓದು’ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಧಾರ್ಮಿಕ ಮತ್ತು ಐಹಿಕ ಸಂಗತಿಗಳ ಸಮನ್ವಯವಾಗಿರುವ ಹಳೆಗನ್ನಡ ಸಾಹಿತ್ಯದ ಮೌಲ್ಯಗಳನ್ನು ಜನತೆಯಲ್ಲಿ ಬಿತ್ತಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಎನ್ ಚಲವಾದಿ ಅವರು ಹಳೆಗನ್ನಡ ಸಾಹಿತ್ಯ ನೀತಿಯ ನಿಧಿಯಾಗಿರುವಂಥದ್ದು. ಆ ಸಾಹಿತ್ಯವನ್ನು ಓದುವ ಆಸಕ್ತಿಯನ್ನು ಯುವಜನತೆಯಲ್ಲಿ ಬೆಳೆಸಬೇಕೆಂದರು. ಕನ್ನಡ ಭಾರತಿ ನಿರ್ದೇಶಕರಾದ ಪ್ರೊ.ನೆಲ್ಲಿಕಟ್ಟೆ ಎಸ್ ಸಿದ್ದೇಶ್, ಶಿವಮೊಗ್ಗ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ ಎಚ್ ಉಪಸ್ಥಿತರಿದ್ದರು ಡಾ. ನವೀನ್ ನಿರೂಪಿಸಿದರು ಡಾ.ಪುರುಷೋತ್ತಮ್ ವಂದಿಸಿದರು.
