
ಬಳ್ಳಾರಿ, ಜು.17: ಇತ್ತೀಚೆಗೆ ನಿಧನರಾದ ಹಿರಿಯ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಕುಟುಂಬಕ್ಕೆ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಅವರು 5 ಲಕ್ಷ ರು.ಗಳ ನೆರವು ನೀಡಿದರು. ಮಂಜುನಾಥ ಗೋವಿಂದವಾಡ ಅವರ ಮಾತೃಶ್ರೀ ಸರ್ವಮಂಗಳಾ , ಪತ್ನಿ ಭಾವನಾ ಹಾಗೂ ಪುತ್ರಿ ತೃಪ್ತಿಶ್ರೀ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಕಲಾವಿದರಾದ ಸುಬ್ಬಣ್ಣ, ಅಂಬರೇಷ, ಜಯಣ್ಣ, ಗಾಯಕ ಎಸ್.ಎಂ. ಹುಲುಗಪ್ಪ, ವೀರೇಶ ದಳವಾಯಿ ಇತರರಿದ್ದರು.
