ನಿನ್ನನ್ನು ನೋಡಿದಾಗಲೆಲ್ಲ ಅನಿಸೋದು,
ನೀನು ಹೆಣ್ಣಲ್ಲ, ನೀನು ಒಂದು ಜೀವಂತ ಪ್ರಕೃತಿ ಅಂತ.
ನಿನ್ನ ಕಣ್ಣುಗಳು ಎರಡು ಕಾಡ ಸರೋವರಗಳು,
ನಾನು ದಣಿದಾಗೆಲ್ಲ ನನ್ನೇ ತಣಿಸುವ.
ನಿನ್ನ ಕೂದಲು ಮಳೆಗಾಲದ ಸಂಜೆ,
ಅದರ ನೆರಳಲ್ಲೇ ನಾನು ಮನೆ ಕಟ್ಟಿಕೊಳ್ಳಬೇಕು ಅನಿಸೋದು.
ನಿನ್ನ ನಗು, ನಮ್ಮ ಗುಡ್ಡದ ಮೇಲೆ ಬೀಳುವ ಮೊದಲ ಬಿಸಿಲು,
ನೀನು ನಕ್ಕರೆ ಸಾಕು, ನನ್ನ ದಿನವೆಲ್ಲ ಅರಳುತ್ತೆ.
ನಿನ್ನ ಜೊತೆ ಇರೋದು ಪ್ರಕೃತಿ ಜೊತೆ ನಡಿಯೋ ಹಾಗೆ,
ದಾರಿ ಎಷ್ಟು ದೂರ ಇದ್ದರೂ ದಣಿವೇ ಆಗದ ಹಾಗೆ.
ನೀನು ಹೀಗೇ ಇರು,
ನನ್ನೆಲ್ಲಾ ಋತುಗಳೂ ನಿನ್ನಲ್ಲೇ ಇರಲಿ ಅಂತ. ✨🌿💚

-ಅಗಸ್ತ್ಯ ಮಹೇಶ್, ಮೈಸೂರು
——
