ಅನುದಿನ ಕವನ-೧೯೭೧, ಕವಿ: ಮಹಾದೇವ ಎಸ್.ಪಾಟೀಲ ರಾಯಚೂರು, ಕವನದ ಶೀರ್ಷಿಕೆ: ಹಾಯ್ಕುಗಳು

ಹಾಯ್ಕುಗಳು

ನಿನ್ನ ನೆನಪು
ಬೇಡವಾಗಿದೆ ಈಗ
ಮದಿರೆ ಮತ್ತು…

ಇಡೀ ಬದುಕು
ನೆನೆದು ಸೋತಿದ್ದಕ್ಕೆ
ಉಸಿರು ಬಿಟ್ಟೆ

ಗೋರಿಯ ಮುಂದೆ
ನೆನಪಿನ‌ ಕಣ್ಣೀರು
ಮೌನ ವೇದನೆ

ನಿನ್ನ ಸಾವಿಗೆ
ನಾನೇ ಕಾರಣವೆಂದು
ಧರೆ ಗುಡಗಿತು

ನನ್ನ ಗಜಲ್
ಹಾಡಿ ಕುಣಿದವಳು
ಗೋರಿಯ ಶವ

ಮೈತುಂಬ ಪ್ರೀತಿ
ಆವರಿಸಿದ ಮೋಹ
ಒಂಟಿ ಪಯಣ

ಹಚ್ಚಿದ ಕಿಚ್ಚು
ಹೊತ್ತಿ ಉರಿಯುತ್ತಿದೆ
ಧಗೆ ಆರದೆ

-ಮಹಾದೇವ ಎಸ್.ಪಾಟೀಲ
ರಾಯಚೂರು.

Leave a Reply

Your email address will not be published. Required fields are marked *