ಅಕ್ಕರೆ ಅಕ್ಷರ ಎರಡನ್ನೂ ಅರಿಯದವರು
ಕಾಗುಣಿತ ಅರಿಯದವರು ಅಕ್ಷರಗಳ ಬರೆಯಲಿಲ್ಲ,.
ಬೇಕು ಬೇಕಾದ ಹಾಗೆ ಗೀಚಿದರು..
ಅವು ಅಕ್ಷರಗಳು ಅನಿಸಿಕೊಳ್ಳಲಿಲ್ಲ..
ಗೀಚುಗಳೆನಿಸಿಕೊಂಡವು..
ಅಕ್ಕರೆ ಅರಿಯದ ಮನಗಳು ಅಕ್ಷರಗಳ ಬರೆದವಾದರೂ ಹೇಗೆ?
ಅಕ್ಷರಗಳು ಕಣ್ಣೀರಿಟ್ಟವು..
ಅಕ್ಷರಗಳಿಲ್ಲಿ ಸ್ವಾರ್ಥಿಗಳ ಬಂಧಿಗಳಾಗಿವೆ..
ಅಕ್ಷರಗಳ ಕಂಡು ಹಿಡಿದವರು ನಾವೇ ಅನ್ನುತ್ತಿದ್ದಾರೆ…
ಹಾಗೆಂದು ಬೀಗುತ್ತಿದ್ದಾರೆ…
ಗರ್ವದಿಂದ ಪುಟಿಪುಟಿದು ನೆಗೆಯುತ್ತಿದ್ದಾರೆ…
ಬಂಧಿಯಾಗಿದ್ದ ಅಕ್ಷರಗಳು ಅಕ್ಕರೆ ಅರಿಯದವರಿಂದ ತಪ್ಪಿಸಿಕೊಂಡು ನಿಸ್ವಾರ್ಥಿಗಳ,ನಿರಹಂಕಾರಿಗಳ ,
ಸುಸಂಸ್ಕೃತರ
ಮಡಿಲು ಸೇರಿವೆ..
ಇನ್ನೇನಿದೆ?
ಇನ್ನೇನಿದ್ದರೂ ದುರ್ಯೋಧನನ ಘೋಷಯಾತ್ರೆ..
ವೈಶಂಪಾಯನದೆಡೆಗೆ ಸುಯೋಧನನ ಅಂತಿಮ ಪಯಣ..ಸುಯೋಧನನ ಪತನ

-ಮಹಿಮ, ಬಳ್ಳಾರಿ
