ಅನುದಿನ ಕವನ-೨೦೨೬, ಕವಯತ್ರಿ: ಮಾನಸಾ ಕೀಳಂಬಿ, ಬೆಂಗಳೂರು

ಸುತ್ತಲೂ ಬಿರು ಬಿಸಿಲು
ಕಣ್ಣು ಕತ್ತಲಾಗುತ್ತಿದೆ
ಬೆಳಕನರಸುತ್ತೇನೆ ನಾನು

ಊರೆಲ್ಲಾ ಬೆಂಕಿ
ಕಣ್ಣು ಸೀಯುತ್ತಿದೆ
ಬೆಳಕನರಸುತ್ತೇನೆ ನಾನು

ವಿದ್ಯುದ್ದೀಪಗಳ ಅಲಂಕಾರ
ಕಣ್ಣು ಕುಕ್ಕುತ್ತಿದೆ
ಬೆಳಕನರಸುತ್ತೇನೆ ನಾನು

ಎತ್ತನೋಡಿದರತ್ತ ಕತ್ತಲು
ಅಂತರಂಗಕೆ ಇಣುಕಿ
ಬೆಳಕನರಸುತ್ತೇನೆ ನಾನು

ಅಲ್ಲಿ ಕಂಡ ಬೆಳಕಿಗೆ
ಕಣ್ಣು ಕತ್ತಲಾಗುವುದಿಲ್ಲ
ಸೀಯುವುದಿಲ್ಲ, ಕುಕ್ಕುವುದಿಲ್ಲ

ಆ ಬೆಳಕಿನ ಪ್ರಭೆಯಲ್ಲಿ
ಜಗವು ಬೆಳಗಲೆಂದು
ದೀಪ ಹಚ್ಚುತ್ತೇನೆ ನಾನು

-ಮಾನಸಾ ಕೀಳಂಬಿ, ಬೆಂಗಳೂರು

Leave a Reply

Your email address will not be published. Required fields are marked *