ಅನುದಿನ ಕವನ-೨೦೩೧, ಕವಿ: ಎ.ಎನ್.ರಮೇಶ್, ಗುಬ್ಬಿ.

“ನನ್ನ ಮೂರು ಜನಪ್ರಿಯ ಮತ್ತು ಜನಪ್ರೀತಿಯ ಚುಟುಕುಗಳು.. ಅಕ್ಷರಬಂಧುಗಳ ಅಕ್ಕರೆಗಾಗಿ ಮತ್ತೊಮ್ಮೆ.. ಒಪ್ಪಿಸಿಕೊಳ್ಳಿ..”                                        -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

1. ನಂಟು..!

ಕಡಲಿನ ನಿಟ್ಟುಸಿರೇ…
ಮುಗಿಲು.!
ಮುಗಿಲಿನ ಕಂಬನಿಯೇ…
ಕಡಲು.!!
*****

2. ಶಿಲೆ.!

ಸಾವಿನವರೆಗೂ ಕೆತ್ತಿದರೂ
ಪರಿಪೂರ್ಣ ಶಿಲ್ಪವಾಗದ
ಏಕೈಕ ಶಿಲೆ ಮನುಜ.!
*****

3. ಜೋಕೆ.!

ಕಿಸೆಗಳ್ಳರಿದ್ದಾರೆ ಎಚ್ಚರಿಕೆ
ಅದು ಆಗಿರಲೂಬಹುದು..
ನಿಮ್ಮದೇ ಮನೆಯಾಕೆ.!

-ಎ.ಎನ್.ರಮೇಶ್.ಗುಬ್ಬಿ.

Leave a Reply

Your email address will not be published. Required fields are marked *