ಜಾನಪದ ಅಕಾಡೆಮಿ ಪ್ರಶಸ್ತಿಗೆ ಮುಮ್ತಾಜ್ ಬಿರಾದಾರ್ ಆಯ್ಕೆ

ಬಳ್ಳಾರಿ: ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸಾಹಿತಿ ಡಾ.ಮುಮ್ತಾಜ್ ಬಿರಾದಾರ್ ಅವರ ಕೃತಿ ಆಯ್ಕೆಯಾಗಿದೆ.
ಜಾನಪದ ಸಾಹಿತ್ಯದಲ್ಲಿ ತವರು ಮನೆ ಕೃತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಆಯ್ಕೆ ಮಾಡಿದೆ. ಪ್ರಶಸ್ತಿಯೂ 25,000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ‌.
ಫೆ.7 ರಂದು ಚಾಮರಾಜ ನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ..

Leave a Reply

Your email address will not be published. Required fields are marked *