ಮಂಜಮ್ಮ ಜೋಗತಿ ಅವರ ಆತ್ಮಕಥನ “ನಡುವೆ ಸುಳಿವ ಹೆಣ್ಣು” ಕೃತಿ ಲೋಕಾರ್ಪಣೆ: ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರಿಂದ ಬಿಡುಗಡೆ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ ಅವರ ನಡುವೆ ಸುಳಿವ ಹೆಣ್ಣು ಆತ್ಮಕಥನ ಕೃತಿಯನ್ನು ಪ್ರಸಿದ್ಧ ಕವಿ ಡಾ. ಸಿದ್ದಲಿಂಗಯ್ಯ ಅವರು ಇಂದು(ಜ.೩೧) ಲೋಕಾರ್ಪಣೆಗೊಳಿಸಿದರು.
ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಕೃತಿಕಾರ ಸಂಶೋದಕ ಡಾ. ಅರುಣಜೋಳದ ಕೂಡ್ಲಿಗಿ, ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವ ವೆಂಕಟೇಶ್, ಬಿ. ಮಂಜಮ್ಮ ಜೋಗತಿ ಅವರು ಉಪಸ್ಥಿದ್ದರು.
ಚನ್ನಪಟ್ಟಣದ ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಮರಿಯಮ್ಮನಹಳ್ಳಿಯ ಜೋಗತಿ ತಂಡದ ಜೋಗತಿ ನೃತ್ಯ ಗಮನಸೆಳೆಯಿತು.

Leave a Reply

Your email address will not be published. Required fields are marked *