ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ: ಒಂದು ಕೋಟಿ ರೂ. ಅಧಿಕ ಮೌಲ್ಯದ ಗಾಂಜಾ ನಾಶ

ಬಳ್ಳಾರಿ,ಜೂ.26: ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಪೊಲೀಸ್ ಠಾಣೆಗಳ 62 ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡಿದ್ದ ಅಂದಾಜು ಮೌಲ್ಯ 1,0065,745 ರೂ. ಬೆಲೆ ಬಾಳುವ 630 ಕೆಜಿ ಗಾಂಜಾವನ್ನು ಶನಿವಾರ ನಾಶಪಡಿಸಲಾಯಿತು.
ತಾಲೂಕಿನ ಹರಗಿನದೋಣಿ ಗ್ರಾಮದ ಬಳಿ ಇರುವ ಮಹಾನಗರ ಪಾಲಿಕೆ ಕಸವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಧಿಕಾರಿ ಸೈದುಲ್ ಅಡಾವತ್ ಅವರ ನೇತೃತ್ವದಲ್ಲಿ ಪೊಲೀಸರು ನಾಶಗೊಳಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಬಿ.ಎನ್.ಲಾವಣ್ಯ,ಡಿವೈಎಸ್ಪಿ ರಮೇಶ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.
*****

Leave a Reply

Your email address will not be published. Required fields are marked *