ಅನುದಿನ ಕವನ-೨೪೪, ಕವಯತ್ರಿ: ಶ್ರೀಮತಿ. ಎಂ. ಅರುಂಧತಿ, ಸ. ಶಿ, ಇಳಕಲ್ ಕವನದ ಶೀರ್ಷಿಕೆ: ನೆನಪು

ನೆನಪು

ನೆನಪುಗಳ ರಾಶಿಯಲಿ
ನೆನಪೊಂದ ಹುಡುಕುತಿಹೆ
ನೆನಪಿಸಿ ಹೇಳು ಬಾರ
ನೀ ನೆನಪಿನೊಡೆಯ
ನೀ ನೆನಪಿನೊಡೆಯ
ನೆನಪು ನೆನಪುಗಳ ನೂಕಿ
ನೆನಪಿಸಿ ನೆನಪಿಸಿ ಬರಲು
ಯಾವ ನೆನಪೆಂದು ನೆನಪಿಸಿಕೊಳ್ಳಲಿ
ನೆನಪಿಸಿ ಹೇಳು ಬಾರ
ನೀ ನೆನಪಿನೋಣಿಯ
ನೆನಪುಗಳ ಶರಧಿಯಲಿ
ನೆನಪುಗಳಾ ಅಲೆಗಳು
ನೆನಪಿಸಲೇ ಜಾರುವವು
ಹಿಡಿದು ಕೊಡಬಾರಾ
ನಿನಗೆ ನಾ ನೆನಪಿಸುವೆ
ಅಲ್ಲಿ ನೀ ಕರೆದ ನೆನಪು
ಹಿಂದೆ ನಾ ಬಂದ ನೆನಪು
ನೀ ಕೈಯ ಹಿಡಿದ ನೆನಪು
ಆದರೂ ಎಲ್ಲವೂನೂ
ನೆನಪು ನೆನಪು ಬರೀ ನೆನಪು
ನನ್ನ ನೀ ನೋಡಿದ ನೆನಪು
ನಾ ತುಸು ನಕ್ಕ ನೆನಪು
ಹೃದಯ ಡಿಂಡಿಮದ ನೆನಪು
ಅನುರಾಗದಲೆಗಳ ನೆನಪು
ನೆನಪಿಸಿ ಹೇಳು ಬಾರಾ
ನೀ ನೆನಪಿನೊಡೆಯ
ನೀ ನೆನಪಿನೊಡೆಯ…

-ಶ್ರೀಮತಿ. ಎಂ. ಅರುಂಧತಿ,
ಸ. ಶಿ, ಇಳಕಲ್
*****

Leave a Reply

Your email address will not be published. Required fields are marked *