ಬೆಂಗಳೂರಿನ ಸಮಾಜಮುಖಿ ಪ್ರಕಾಶನದಿಂದ ವಾರ್ಷಿಕ ಕಥಾಸ್ಪರ್ಧೆ

ಕನ್ನಡ ಕಥೆಗಾರರ ಗಮನಕ್ಕೆ…
ಬೆಂಗಳೂರು, ಅ.20: ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ವಾರ್ಷಿಕ ಕಥಾಸ್ಪರ್ಧೆ ಏರ್ಪಡಿಸಿದೆ.
ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ಆಯ್ದ ಒಟ್ಟು ಹದಿನೈದು ಕಥೆಗಳನ್ನು ಒಳಗೊಂಡ ಸಮಾಜಮುಖಿ ವಾರ್ಷಿಕ ಕಥಾ ಸಂಕಲನ ಜನೆವರಿ 2022ರಲ್ಲಿ ಹೊರಬರಲಿದೆ.
ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 20 ನವೆಂಬರ್ 2021ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ:
samajamukhi2017@gmail.com
*****

Leave a Reply

Your email address will not be published. Required fields are marked *